ಸಾಗರ | sagara news | ಮೊಬೈಲ್ ಪೋನ್ ಚಾರ್ಜ್ ಹಾಕುವ ವಿಚಾರದಲ್ಲಿ ನಡೆದಿದ್ದ ಕೊಲೆ ಪ್ರಕರಣ : ವ್ಯಕ್ತಿಗೆ ಕಠಿಣ ಜೈಲು ಶಿಕ್ಷೆ!
ಸಾಗರ (sagara), ಡಿಸೆಂಬರ್ 28: ವ್ಯಕ್ತಿಯೋರ್ವರೊಂದಿಗೆ ಗಲಾಟೆ ಮಾಡಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದವನಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಸಾಗರದ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಡಿಸೆಂಬರ್ 26 ರಂದು ತೀರ್ಪು ನೀಡಿದೆ.
ಸಾಗರ ತಾಲೂಕು ಮಾರುತಿ ನಗರದ ಮೂರಳ್ಳಿ ಗ್ರಾಮದ ನಿವಾಸಿ ಸಿದ್ದಪ್ಪ (38) ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಜೈಲು ಶಿಕ್ಷೆಯ ಜೊತೆಗೆ 14 ಸಾವಿರ ರೂ. ದಂಡ ವಿಧಿಸಲಾಗಿದ್ದು, ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 4 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಾಧೀಶರಾದ ರವೀಂದ್ರ ಆರ್ ರವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅಣ್ಣಪ್ಪ ನಾಯ್ಕ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : ಮೂರಳ್ಳಿ ಗ್ರಾಮದ ನಿವಾಸಿಯಾದ ತಿಮ್ಮಪ್ಪ (52) ಹಾಗೂ ಅವರ ಪತ್ನಿಯೊಂದಿಗೆ, ಮೊಬೈಲ್ ಫೋನ್ ಚಾರ್ಜ್ ಹಾಕುವ ವಿಚಾರದಲ್ಲಿ, ಅಪರಾಧಿ ಸಿದ್ದಪ್ಪನು 7-12-2022 ರಂದು ಗಲಾಟೆ ಮಾಡಿಕೊಂಡಿದ್ದ. ಅವರ ಮನೆಗೆ ತೆರಳಿ ಟಿವಿ ಡಿಶ್ ಬುಟ್ಟಿಯನ್ನು ದೊಣ್ಣೆಯಿಂದ ಹೊಡೆದು ಹಾಕಿದ್ದ.
ಹಾಗೆಯೇ ತಿಮ್ಮಪ್ಪರ ಎಡಗಣ್ಣಿನ ಹುಬ್ಬಿನ ಮೇಲೆ ದೊಣ್ಣೆಯಿಂದ ಹೊಡೆದು ಗಂಭೀರವಾಗಿ ಗಾಯ ಮಾಡಿದ್ದ. ತಿಮ್ಮಪ್ಪರನ್ನು ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಸಿದ್ದಪ್ಪನ ವಿರುದ್ದ ಕೊಲೆ ಪ್ರಕರಣ ದಾಖಲಾಗಿತ್ತು.
ಅಂದಿನ ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಕೆ ವಿ ಕೃಷ್ಣಪ್ಪರವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
Sagar, December 28: The 5th Additional District and Sessions Court of Sagar on December 26 sentenced a man to 4 years rigorous imprisonment for murdering a man after a fight with him and beating him with a stick.
