Shivamogga: Inspection by a team of officials at a cake manufacturing unit! ಶಿವಮೊಗ್ಗ : ಕೇಕ್ ತಯಾರಿಕ ಘಟಕದಲ್ಲಿ ಅಧಿಕಾರಿಗಳ ತಂಡದಿಂದ ತಪಾಸಣೆ!

shimoga news | new year | ಶಿವಮೊಗ್ಗ : ಕೇಕ್ ತಯಾರಿಕ ಕೇಂದ್ರದಲ್ಲಿ ಅಧಿಕಾರಿಗಳ ತಂಡದಿಂದ ತಪಾಸಣೆ!

ಶಿವಮೊಗ್ಗ (shivamogga), ಡಿಸೆಂಬರ್ 30: ಹೊಸ ವರ್ಷಾಚರಣೆ – 2026 ಸಂಭ್ರಮಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಕೇಕ್ ಗಳಿಗೆ ಸಖತ್ ಡಿಮ್ಯಾಂಡ್ ಕಂಡುಬರುತ್ತಿದೆ. ಈ ನಡುವೆ ವಿವಿಧ ಇಲಾಖೆ ಅಧಿಕಾರಿಗಳ ತಂಡವು, ಶಿವಮೊಗ್ಗ ನಗರದ ಕೇಕ್ ತಯಾರಿಕಾ ಘಟಕಕ್ಕೆ ದಿಡೀರ್ ಭೇಟಿಯಿತ್ತು, ತಪಾಸಣೆ ನಡೆಸಿದ ಘಟನೆ ನಡೆದಿದೆ.

ಡಿಸೆಂಬರ್ 30 ರ ಸಂಜೆ ರವೀಂದ್ರ ನಗರದಲ್ಲಿರುವ ಕೇಕ್ ತಯಾರಿಕಾ ಕೇಂದ್ರವೊಂದರಲ್ಲಿ ತಪಾಸಣೆ ನಡೆಸಲಾಗಿದೆ. ಕೇಕ್ ತಯಾರಿಕೆ ವೇಳೆ ಗುಣಮಟ್ಟ ಹಾಗೂ ನಿಯಮಗಳ ಪಾಲನೆ ಕಾಯ್ದುಕೊಳ್ಳಲಾಗುತ್ತಿದೆಯೇ? ಎಂಬುವುದರ ಖುದ್ದು ಪರಿಶೀಲನೆ ನಡೆಸಿದೆ.  

ತಪಾಸಣೆ ವೇಳೆ ಕೇಕ್ ತಯಾರಿಕಾ ಕೇಂದ್ರದಲ್ಲಿ ಕಂಡುಬಂದ ನ್ಯೂನ್ಯತೆಗಳನ್ನು ಪರಿಶೀಲಿಸಿದ ಅಧಿಕಾರಿಗಳ ತಂಡವು, ಕೇಂದ್ರದ ಮಾಲೀಕರಿಗೆ ನೋಟೀಸ್ ಜಾರಿಗೊಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಪಾಸಣೆ ವೇಳೆ ಶಿವಮೊಗ್ಗ ಉಪ ವಿಭಾಗದ ಉಪ ವಿಭಾಗಾಧಿಕಾರಿ ಹಾಗೂ ಅಂಕಿತ ಅಧಿಕಾರಿಗಳಾದ ಸತ್ಯನಾರಾಯಣ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಾದ ಅವಿನ್, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಅವರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

All preparations are underway for the New Year – 2026 celebrations. There is a strong demand for cakes. Meanwhile, a team of officials from various departments made a surprise visit to the cake manufacturing unit in Shivamogga city and conducted an inspection.

Operation against cannabis across Shimoga district! ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ವಿರುದ್ದ ಕಾರ್ಯಾಚರಣೆ! Previous post shimoga crime news | ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ವಿರುದ್ದ ಕಾರ್ಯಾಚರಣೆ!