Shivamogga: 8-foot-long lake snake found in Andi..! ಶಿವಮೊಗ್ಗ : ಅಂಗಡಿಯಲ್ಲಿ ಅಡಗಿದ್ದ 8 ಅಡಿ ಉದ್ದದ ಕೆರೆ ಹಾವು..!

shimoga news | ಶಿವಮೊಗ್ಗ : ಅಂಗಡಿಯಲ್ಲಿ ಅಡಗಿದ್ದ 8 ಅಡಿ ಉದ್ದದ ಕೆರೆ ಹಾವು..!

ಶಿವಮೊಗ್ಗ (shivamogga), ಜನವರಿ 4: ವಾಹನಗಳ ಬಿಡಿ ಭಾಗ ಮಾರಾಟ ಮಾಡುವ ಅಂಗಡಿಯೊಂದರಲ್ಲಿ ಬೃಹದಾಕಾರದ ಕೆರೆ ಹಾವು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ, ಜನವರಿ 3 ರಂದು ಶಿವಮೊಗ್ಗ ನಗರದ ಇಲಿಯಾಜ್ ನಗರದಲ್ಲಿ ನಡೆದಿದೆ.

100 ಅಡಿ ಮುಖ್ಯ ರಸ್ತೆಯಲ್ಲಿರುವ ಫಾರೂಕ್ ಎಂಬುವರ ಅಂಗಡಿಯಲ್ಲಿ ಹಾವು ಕಾಣಿಸಿಕೊಂಡಿತ್ತು. ತಕ್ಷಣವೇ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು.

ಸ್ಥಳಕ್ಕಾಗಮಿಸಿದ ಕಿರಣ್ ಅವರು ಟೈರ್ ಗಳಿದ್ದ ಸ್ಥಳದಲ್ಲಿದ್ದ ಹಾವನ್ನು ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ. ‘ಸದರಿ ಹಾವು ಸುಮಾರು ಎಂಟೂವರೆ ಅಡಿ ಉದ್ದವಿದೆ. ಕೆರೆ ಹಾವಾಗಿದ್ದು, ವಿಷರಹಿತವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಹಾವುಗಳು ಪ್ರಾಕೃತಿಕ ವ್ಯವಸ್ಥೆಯಲ್ಲಿನ ಜೀವ ವೈವಿಧ್ಯದಲ್ಲಿ, ಅಪರೂಪದ ಜೀವಿಗಳಾಗವೆ. ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಾಗ ಅವುಗಳನ್ನು ಸಾಯಿಸುವುದು, ಹಿಂಸಿಸುವುದು ಮಾಡಬೇಡಿ. ಶಿವಮೊಗ್ಗ ನಗರದ ಸುತ್ತಮುತ್ತಲು ಹಾವುಗಳು ಕಾಣಿಸಿಕೊಂಡ ವೇಳೆ ತಮಗೆ ಮಾಹಿತಿ ನೀಡಿದರೆ ಸಂರಕ್ಷಸುವ ಕಾರ್ಯ ಮಾಡುವುದಾಗಿ’ ಕಿರಣ್ ಅವರು ನಾಗರಿಕರಿಗೆ ಮನವಿ ಮಾಡಿದ್ದಾರೆ.

Shivamogga, January 4: A huge pond snake was spotted at a shop selling vehicle spare parts, creating panic, in an incident that took place on January 3 in Iliaz Nagar, Shivamogga city. The snake was spotted at Farooq’s shop on the main road.

He immediately informed reptile conservationist Snake Kiran. Kiran, who reached the spot, safely rescued the snake from the tires. He informed that the snake is about eight and a half feet long. It is a lake snake and is non-venomous.

Previous post bhadravati news | ಶಿವಮೊಗ್ಗದ ಐವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಭದ್ರಾವತಿ ಕೋರ್ಟ್ : ಕಾರಣವೇನು?
Shimoga Municipal Corporation Area Revision: Why the Negligence of the People's Representatives?! Reporter : B. Renukesh shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಜನಪ್ರತಿನಿಧಿಗಳ ನಿರ್ಲಕ್ಷ್ಯವೇಕೆ?! Next post shimoga palike news | ಶಿವಮೊಗ್ಗ ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಪಾಲಿಕೆ ಎಚ್ಚರಿಕೆಯೇನು?