bhadravati news | ಶಿವಮೊಗ್ಗದ ಐವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಭದ್ರಾವತಿ ಕೋರ್ಟ್ : ಕಾರಣವೇನು?
ಭದ್ರಾವತಿ (bhadravathi), ಜನವರಿ 4: ದರೋಡೆಗೆ ಹೊಂಚು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಐವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಭದ್ರಾವತಿಯ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಶಿವಮೊಗ್ಗದ ಟಿಪ್ಪುನಗರದ ನಿವಾಸಿ ಇಮ್ರಾನ್ ಷರೀಪ್ (33), ತಾಲೂಕಿನ ಕಡೇಕಲ್ ನಿವಾಸಿಗಳಾದ ಅಬೀದ್ ಖಾನ್ (35), ಮುಜಾಹಿತ್ ಯಾನೆ ಮುಚ್ಚು (40), ಟಿಪ್ಪುನಗರದ ನಿವಾಸಿ ಹನೀಪುಲ್ಲಾ ಖಾನ್ (22) ಹಾಗೂ ಕಡೇಕಲ್ಲು ಗ್ರಾಮದ ನಸ್ರುಲ್ಲಾ (29) ಶಿಕ್ಷೆಗೊಳಗಾದವರೆಂದು ಗುರುತಿಸಲಾಗಿದೆ.
ಅಪರಾಧಿಗಳಿಗೆ ವಿವಿಧ ಕಲಂಗಳಡಿ ಕ್ರಮವಾಗಿ 50 ಹಾಗೂ 30 ಸಾವಿರ ರೂ. ಪ್ರತ್ಯೇಕ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಕ್ರಮವಾಗಿ 5 ಹಾಗೂ 3 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು 3/1/2026 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಕ್ರಮವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : 1-2-2019 ರ ರಾತ್ರಿ ಸಮಯದಲ್ಲಿ ಗೋಂಧಿ ಕೈಮರ ಗ್ರಾಮದ ಬಳಿ ಸದರಿ ಅಪರಾಧಿಗಳು ಮರದ ದೊಣ್ಣೆ, ಕಬ್ಬಿಣದ ಚಾಕು, ಖಾರದ ಪುಡಿ ಮತ್ತು ಸ್ಟೀಲ್ ರಾಡ್ ಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ವಾಹನಗಳನ್ನು ಅಡ್ಡ ಹಾಕಲು ಯತ್ನಿಸುತ್ತಿದ್ದರು.
ವಿಷಯ ತಿಳಿದ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಈ ವೇಳೆ ಓರ್ವ ಪರಾರಿಯಾಗಿದ್ದ. ಉಳಿದವರು ಸಿಕ್ಕಿ ಬಿದ್ದಿದ್ದರು. ವಿಚಾರಣೆ ವೇಳೆ ದರೋಡೆಗೆ ಹೊಂಚು ಹಾಕಿರುವ ಸಂಗತಿ ಬಾಯ್ಬಿಟ್ಟಿದ್ದರು. ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಎಸ್ಐ ಹುಚ್ಚಪ್ಪರವರು ಪ್ರಕರಣದ ತನಿಖೆ ನಡೆಸಿದ್ದರು. ಸದರಿಯವರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.
Bhadravati, January 4: The 4th Additional District and Sessions Court of Bhadravati has sentenced five people to 10 years in rigorous imprisonment in a case of ambush for robbery.

One thought on “bhadravati news | ಶಿವಮೊಗ್ಗದ ಐವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಭದ್ರಾವತಿ ಕೋರ್ಟ್ : ಕಾರಣವೇನು?”
Comments are closed.