shimoga news | ಶಿವಮೊಗ್ಗ ನಗರದ ವಿವಿಧೆಡೆ ದಿಡೀರ್ ಕಾರ್ಯಾಚರಣೆ : 4 ಕಿಶೋರ ಕಾರ್ಮಿಕರು ಪತ್ತೆ!

Sudden Operation Across Shimoga City: 4 Adolescent Workers Found! ಶಿವಮೊಗ್ಗ ನಗರದ ವಿವಿಧೆಡೆ ದಿಡೀರ್ ಕಾರ್ಯಾಚರಣೆ : 4 ಕಿಶೋರ ಕಾರ್ಮಿಕರು ಪತ್ತೆ!

ಶಿವಮೊಗ್ಗ (shivamogga), ಜನವರಿ 15: ಶಿವಮೊಗ್ಗ ನಗರದಲ್ಲಿ ವಿವಿಧ ಇಲಾಖೆಗಳು ಜಂಟಿಯಾಗಿ, ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಪತ್ತೆ ಕಾರ್ಯಾಚರಣೆ ನಡೆಸಿವೆ. ಈ ವೇಳೆ 4 ಕಿಶೋರ ಕಾರ್ಮಿಕರು (14 ರಿಂದ 18 ವರ್ಷದೊಳಗಿನ) ಪತ್ತೆಯಾದ ಘಟನೆ ನಡೆದಿದೆ.

ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಸಂಯುಕ್ತಾಶ್ರಯದಲ್ಲಿ ದಿಡೀರ್ ತಪಾಸಣಾ ಕಾರ್ಯ ನಡೆಸಲಾಗಿದೆ.

ಕಾರ್ಯಾಚರಣೆ ವೇಳೆ ಪತ್ತೆಯಾದ ಕಿಶೋರ ಕಾರ್ಮಿಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ತೀರ್ಥಹಳ್ಳಿ ರಸ್ತೆ, ಬೈಪಾಸ್, ನ್ಯೂ ಮಂಡ್ಲಿಯ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಆಟೋ ವರ್ಕ್ಸ್, ಬೀದಿ ಬದಿ ವ್ಯಾಪಾರಿಗಳಿಗೆ ಬಾಲ ಕಾರ್ಮಿಕ ಹಾಗೂ ಕಿಶೋರಾ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ಬಗ್ಗೆ ಎಂದು ತಿಳಿಸಿದ್ದಾರೆ.

ತಪಾಸಣೆ ವೇಳೆ ಕಾರ್ಮಿಕ ಇಲಾಖೆ ನಿರೀಕ್ಷಕರಾದ  ಕೃಷ್ಣ ಎಂ, ಯೋಜನಾ ನಿರ್ದೇಶಕರಾದ ರಘುನಾಥ ಎ. ಎಸ್., ಪೊಲೀಸ್ ಸಿಬ್ಬಂದಿ ಲಕ್ಷ್ಮಣ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪುನೀತ್, ಶಿಕ್ಷಕರಾದ ರಾಮಪ್ಪ ಮೊದಲಾದವರಿದ್ದರು.

Sudden Operation Across Shimoga City: 4 Adolescent Workers Found! | Shimoga, January 15: In Shimoga city, various departments jointly conducted an operation to identify child and adolescent laborers. During this drive, 4 adolescent workers (aged between 14 and 18 years) were found. The operation was carried out under the joint initiative of the Labor Department, District Child Labor Project Society, Department of Women and Child Development, Education Department, Police Department, and Childline.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →