shimoga news | ‘ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯೂ ಇಲ್ಲ… ಚುನಾವಣೆಯೂ ಇಲ್ಲ… ನಾಗರಿಕರ ಗೋಳು ಕೇಳೊರಿಲ್ಲ..!’

“No revision of Shivamogga Corporation limits… No elections… Citizens’ grievances unheard..!” | Report by B. Renukesh Shivamogga, January 16 ‘ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯೂ ಇಲ್ಲ… ಚುನಾವಣೆಯೂ ಇಲ್ಲ… ನಾಗರೀಕರ ಗೋಳು ಕೇಳೊರಿಲ್ಲ..!’ ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ಜನವರಿ 16: ‘ಶಿವಮೊಗ್ಗ ಪಾಲಿಕೆ ಚುನಾಯಿತ ಜನಪ್ರತಿನಿಧಿಗಳ ಅವಧಿ ಪೂರ್ಣಗೊಂಡು ಎರಡು ವರ್ಷವಾಗಿದೆ. ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಆರಂಭಗೊಂಡು ವರ್ಷವೇ ಉರುಳಿದೆ. ಒಂದೆಡೆ ರಾಜ್ಯ ಸರ್ಕಾರ ವಾರ್ಡ್ ಗಳ ಚುನಾವಣೆ ನಡೆಸುತ್ತಿಲ್ಲ. ಮತ್ತೊಂದೆಡೆ ಜಿಲ್ಲಾಡಳಿತ ವ್ಯಾಪ್ತಿ ಪರಿಷ್ಕರಣೆ ಪೂರ್ಣಗೊಳಿಸುತ್ತಿಲ್ಲ..!’

ಇದರಿಂದ ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರ ಗೋಳು ಕೇಳುವವರೇ ಇಲ್ಲದಂತಾಗಿದೆ. ಪ್ರತಿಯೊಂದು ಕೆಲಸಕಾರ್ಯಕ್ಕೂ ಜನಸಾಮಾನ್ಯರು ಪಾಲಿಕೆ ಕಚೇರಿಗೆ ಅಲೆದಾಡುವಂತಾಗಿದೆ. ಆಡಳಿತದ ನಿರ್ಲಕ್ಷ್ಯಕ್ಕೆ ನಾಗರೀಕರು ಪರದಾಡುವಂತಾಗಿದೆ.

ನೆನೆಗುದಿಗೆ: ಶಿವಮೊಗ್ಗ ಪಾಲಿಕೆಯ ಚುನಾಯಿತ ಸದ್ಯರ ಅವಧಿಯು 27/11/2023 ರಂದು ಮುಕ್ತಾಯಗೊಂಡಿತ್ತು. ಈ ಕುರಿತಂತೆ ಚುನಾವಣೆ ನಡೆಸುವ ಬಗ್ಗೆ 7-2-2024 ರಂದು ಸರ್ಕಾರಕ್ಕೆ ಅದಿಕೃತ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈ ನಡುವೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿಗೆ ಕೆಲವು ಪ್ರದೇಶಗಳನ್ನು ಸೇರ್ಪಡೆಗೊಳಿಸಿ, ವ್ಯಾಪ್ತಿ ಹೆಚ್ಚಿಸಲು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ಶಿವಮೊಗ್ಗ ಪಾಲಿಕೆ ಆಯುಕ್ತರಿಗೆ 7/2/2024 ರಂದು ಪತ್ರ ಬರೆದು ಕೋರಿದ್ದರು.

ಅದರಂತೆ ಈ ಹಿಂದಿನ ಪಾಲಿಕೆ ಕಮೀಷನರ್ ಆಗಿದ್ದ ಕವಿತಾ ಯೋಗಪ್ಪನವರ್ ಅವಧಿಯಲ್ಲಿ, ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿ ವರದಿ ಸಂಗ್ರಹಿಸಲಾಗಿತ್ತು. ಸದರಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿತ್ತು. ಜಿಲ್ಲಾಧಿಕಾರಿಯಾಗಿದ್ದ ಗುರುದತ್ತ ಹೆಗಡೆ ಅವರು ಸದರಿ ವರದಿ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿದ್ದರು.

ಹೆಚ್ಚಿನ ವರದಿ ಸಲ್ಲಿಸುವಂತೆ ಪಾಲಿಕೆ ಆಡಳಿತಕ್ಕೆ ಸೂಚಿಸಿದ್ದರು. ಆದರೆ ಹಲವು ತಿಂಗಳುಗಳೇ ಕಳೆದರೂ ಪಾಲಿಕೆ ಆಡಳಿತ ಜಿಲ್ಲಾಡಳಿತಕ್ಕೆ ಯಾವುದೇ ವರದಿ ಸಲ್ಲಿಸಿಲ್ಲ. ಈ ಕಾರಣದಿಂದ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಸಂಪೂರ್ಣ ನೆನೆಗುದಿಗೆ ಬೀಳವಂತಾಗಿದೆ. ಇದೀಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪೂರ್ಣಗೊಳ್ಳದಿರುವುದನ್ನೇ ಮುಂದಿಟ್ಟುಕೊಂಡು, ಪಾಲಿಕೆ ವಾರ್ಡ್ ಚುನಾವಣೆ ವಿಳಂಬ ಮಾಡುತ್ತಿರುವ ದೂರುಗಳು ಕೇಳಿಬರಲಾರಂಭಿಸಿವೆ.

ವಿಳಂಬ : ಶಿವಮೊಗ್ಗ ನಗರಾಡಳಿತ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆಯು 30 ವರ್ಷಗಳ ನಂತರ ನಡೆಯುತ್ತಿದೆ. ಪ್ರಸ್ತುತ ಪಾಲಿಕೆ ಆಡಳಿತ ಸಿದ್ದಪಡಿಸಿರುವ ವರದಿಯಲ್ಲಿ, 9 ಗ್ರಾಮ ಪಂಚಾಯ್ತಿಯ 19 ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿ ಸೇರ್ಪಡೆ ಮಾಡಿಕೊಳ್ಳುವ ಚಿಂತನೆ ನಡೆಸಿದೆ. ಈ ಕುರಿತಂತೆ ಈ ಹಿಂದಿನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮೇ ತಿಂಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದರು. ಈ ನಡುವೆ ನಗರಕ್ಕೆ ಹೊಂದಿಕೊಂಡಂತಿರುವ ಕೆಲ ವಸತಿ ಬಡಾವಣೆಗಳನ್ನು, ಪಾಲಿಕೆ ಸಿದ್ದಪಡಿಸಿದ್ದ ವರದಿಯಲ್ಲಿ ಕೈಬಿಡಲಾಗಿತ್ತು.

ಇದು ಬಡಾವಣೆಗಳ ನಾಗರೀಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಗ್ರಾಮ ಪಂಚಾಯ್ತಿ ಆಡಳಿತಗಳಿಂದ ಸಮರ್ಪಕ ನಾಗರೀಕ ಸೌಲಭ್ಯ ಸಿಗದೆ ಸಂಕಷ್ಟ ಅನುಭವಿಸುತ್ತಿರುವ ನಾಗರೀಕರು, ತಮ್ಮ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಲಾರಂಭಿಸಿದ್ದಾರೆ. 

“No revision of Shivamogga Corporation limits… No elections… Citizens’ grievances unheard..!” | Report by B. Renukesh Shivamogga, January 16:“It has been two years since the tenure of the elected representatives of the Shivamogga Municipal Corporation ended. A year has passed since the process of revising the corporation limits began. On one hand, the state government has not conducted ward elections. On the other hand, the district administration has not completed the boundary revision…!” As a result, within the Shivamogga Corporation limits, there seems to be no one to listen to the citizens’ grievances. For every single task, ordinary people are forced to run around the corporation office. Citizens are suffering due to the negligence of the administration.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →