shikaripura news | ಶಿಕಾರಿಪುರ : ಮನೆಯಿಂದ ಶಾಲೆಗೆ ತೆರಳಿದ ಮೂವರು ವಿದ್ಯಾರ್ಥಿಗಳ ನಿಗೂಢ ಕಣ್ಮರೆ!

Shikaripura: Three Students Mysteriously Missing on Their Way to School! ಶಿಕಾರಿಪುರ : ಮನೆಯಿಂದ ಶಾಲೆಗೆ ತೆರಳಿದ ಮೂವರು ವಿದ್ಯಾರ್ಥಿಗಳ ನಿಗೂಢ ಕಣ್ಮರೆ!

ಶಿಕಾರಿಪುರ (shikaripur), ಜನವರಿ 22: ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮನೆಯಿಂದ ಶಾಲೆಗೆ ತೆರಳಿದ ಮೂವರು ವಿದ್ಯಾರ್ಥಿಗಳು ಕಣ್ಮರೆಯಾಗಿರುವ ಘಟನೆ ಜನವರಿ 21 ರಂದು ನಡೆದಿದೆ.

ಈ ಕುರಿತಂತೆ ಪೊಲೀಸ್ ಇಲಾಖೆಯು ಜನವರಿ 22 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಶಿಕಾರಿಪುರದ ಭದ್ರಾಪುರ ಸಮೀಪವಿರುವ ಶ್ರೀಧರ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪುನೇದಹಳ್ಳಿ ವಾಸಿ ಹೇಮರಾಜ್ ಎಂಬುವವರ ಮಕ್ಕಳಾದ ಲಿಖಿತ್ (13) ಮತ್ತು ಪ್ರಥಮ್ (12)

ಹಾಗೂ ಅಂಬಾರಗೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪುನೇದಹಳ್ಳಿ ನಿವಾಸಿ ಪೆದ್ದಪ್ಪ ಎಂಬುವವರ ಮಗ ಸಂದೀಪ್ (15) ನಾಪತ್ತೆಯಾದ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ.

ಜನವರಿ 21 ರಂದು ರಂದು ಬೆಳಿಗ್ಗೆ 09 ಗಂಟೆಗೆ ಎಂದಿನಂತೆ ಈ ಮೂವರು ವಿದ್ಯಾರ್ಥಿಗಳು ಶಾಲೆಗೆ ತೆರಳುವುದಾಗಿ ಮನೆಯಿಂದ ಹೋಗಿದ್ದರು. ಆದರೆ ನಂತರ ಕಣ್ಮರೆಯಾಗಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲಿಖಿತ್‌ನ ಚಹರೆ: 5.2 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಸ್ಕೂಲ್ ಯೂನಿಫಾರಂ ಹಳದಿ ಬಣ್ಣದ ಟೀಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ.

ಪ್ರಥಮ್‌ನ ಚಹರೆ: 5 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಸ್ಕೂಲ್ ಯೂನಿಫಾರಂ ಹಳದಿ ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ.

ಸಂದೀಪ್‌ನ ಚಹರೆ: 5.2 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಸ್ಕೂಲ್ ಯೂನಿಫಾರಂ ಕೇಸರಿ ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಮೂರು ಜನರು ಸ್ಕೂಲ್ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾರೆ.

ಈ ಮೂವರು ಬಾಲಕರ ಬಗ್ಗೆ ಸುಳಿವು ದೊರೆತಲ್ಲಿ ಜಿಲ್ಲಾ ಪೊಲೀಸ್ ಕಚೇರಿ, ಶಿವಮೊಗ್ಗ ನಂ:-08182- 261413, ಡಿ.ಎಸ್.ಪಿ ಶಿಕಾರಿಪುರ ಉಪ ವಿಭಾಗ ಶಿಕಾರಿಪುರ:-08187-222443, 9480803323, ಪಿ..ಐ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ. 08187-222443, 9480803366 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shikaripura: Three Students Mysteriously Missing on Their Way to School! | Shikaripura, January 22: In the jurisdiction of Shikaripura Rural Police Station, an incident occurred on January 21 where three students who left home for school went missing.

According to a press release issued by the police department on January 22, the missing students have been identified as:

  • Likhith (13) and Pratham (12), children of Hemaraj, resident of Punedahalli, studying at Sridhar International School near Bhadrapura, Shikaripura.
  • Sandeep (15), son of Peddappa, resident of Punedahalli, studying at the Government School in Ambaragoppa village.

On January 21, at around 9:00 AM, the three students left home as usual to go to school, but later went missing, the police statement said.

Descriptions of the missing students:

  • Likhith: Height 5.2 feet, wheatish complexion, wearing school uniform – yellow T-shirt and blue pants. Speaks Kannada and English.
  • Pratham: Height 5 feet, wheatish complexion, wearing school uniform – yellow T-shirt and blue pants. Speaks Kannada and English.
  • Sandeep: Height 5.2 feet, wheatish complexion, wearing school uniform – saffron T-shirt and black pants. Speaks Kannada and Telugu.

All three boys were carrying school bags. The police statement has requested that if anyone has information about these three boys, they should contact:

  • District Police Office, Shivamogga: 08182-261413
  • DSP Shikaripura Sub-Division: 08187-222443, 9480803323
  • PI Shikaripura Rural Police Station: 08187-222443, 9480803366

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →