shimoga news | ಶಿವಮೊಗ್ಗ : ಮನೆಯಿಂದ ಅಂಗಡಿಗೆ ತೆರಳಿದ ಚಿನ್ನಬೆಳ್ಳಿ ವ್ಯಾಪಾರಿ ನಾಪತ್ತೆ!

Shivamogga: Jeweler Missing After Leaving Home for Shop! ಶಿವಮೊಗ್ಗ : ಮನೆಯಿಂದ ಅಂಗಡಿಗೆ ತೆರಳಿದ ಚಿನ್ನಬೆಳ್ಳಿ ವ್ಯಾಪಾರಿ ನಾಪತ್ತೆ!

ಶಿವಮೊಗ್ಗ (shivamogga), ಜನವರಿ 2: ಮನೆಯಿಂದ ಅಂಗಡಿಗೆ ತೆರಳಿದ ಚಿನ್ನಬೆಳ್ಳಿ ವ್ಯಾಪಾರಿಯೋರ್ವರು, ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾನಗರ ಬಡಾವಣೆ ಪುಷ್ಪ ಲೇಔಟ್ ನ 3 ನೇ ಕ್ರಾಸ್ ನಿವಾಸಿ ಗೌತಮ್ (33) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಈ ಕುರಿತಂತೆ ಫೆಬ್ರವರಿ 2 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಜನವರಿ 29 ರಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಗೌತಮ್ ಅವರು, ಉಪ್ಪಾರಕೇರಿ ರಸ್ತೆಯಲ್ಲಿರುವ ಅಂಗಡಿಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಆನಂತರ ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ.

ಚಹರೆ : ನಾಪತ್ತೆಯಾದ ಗೌತಮ್ ಅವರು 5.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ತೆಳುವಾದ ಗಡ್ಡಮೀಸೆ ಬಿಟ್ಟಿರುತ್ತಾರೆ. ಎಡಗೈ ಮೇಲೆ SRG ಎಂಬ ಹಚ್ಚೆ ಗುರುತು ಇರುತ್ತದೆ. ಮನೆಯಿಂದ ಹೋಗುವಾಗ ನೀಲಿ ಶರ್ಟ್ ಹಾಗೂ ನೀಲಿ ಜೀನ್ ಪ್ಯಾಂಟ್ ಧರಿಸಿರುತ್ತಾರೆ.

ಇವರ ಕುರಿತಂತೆ ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಪರ್ಕ ಸಂಖ್ಯೆ .: 08182-261414/ 9480803345/ 9844470744 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯ ತಿಳಿಸಿದೆ.

Shivamogga: Jeweler Missing After Leaving Home for Shop! | Shivamogga, January 2: A jeweler who left home to go to his shop has mysteriously gone missing in Shivamogga city. A case has been registered at the Doddapete Police Station The missing person has been identified as Gautham (33), a resident of Vidyanagar Extension, Pushpa Layout, 3rd Cross. This information was released in a police statement on February 2. On the morning of January 29, as usual, Gautham told his family he was going to his shop located on Upparakeri Road. However, he never returned and has since gone missing. No clues have been found about his whereabouts.

Appearance: The missing Gautham is about 5.5 feet tall, has a lean face, medium build, and sports a thin beard and mustache. He has a tattoo mark “SRG” on his left hand. At the time he left home, he was wearing a blue shirt and blue jeans. The police have requested that anyone with information about him contact Doddapete Police Station at the following numbers: 📞 08182-261414 / 9480803345 / 9844470744

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →