shimoga news | ಭದ್ರಾ ಡ್ಯಾಂ ವ್ಯಾಪ್ತಿ ವಿಶ್ವೇಶ್ವರಯ್ಯ ಜಲ ನಿಗಮ ಸೇರ್ಪಡೆ ವಿರೋಧಿಸಿ ಡಿಸಿಎಂಗೆ ಮನವಿ

Petition to Deputy CM Opposing Inclusion of Bhadra Dam Division into Visvesvaraya Jala Nigam ಭದ್ರಾ ಡ್ಯಾಂ ವ್ಯಾಪ್ತಿ ವಿಶ್ವೇಶ್ವರಯ್ಯ ಜಲ ನಿಗಮ ಸೇರ್ಪಡೆ ವಿರೋಧಿಸಿ ಡಿಸಿಎಂಗೆ ಮನವಿ

ಶಿವಮೊಗ್ಗ (shivamogga), ಫೆಬ್ರವರಿ 03: ವಿಶ್ವೇಶ್ವರಯ್ಯ ಜಲ ನಿಗಮ ವ್ಯಾಪ್ತಿಗೆ ಭದ್ರಾ ಜಲಾಶಯ ಯೋಜನಾ ವೃತ್ತ ಸೇರ್ಪಡೆಗೊಳಿಸಬಾರದು ಎಂದು ಶಾಸಕರು ಹಾಗೂ ರೈತ ಮುಖಂಡರ ನಿಯೋಗ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಪತ್ರ ಅರ್ಪಿಸಿದೆ.

ಬೆಂಗಳೂರಿನಲ್ಲಿ ಫೆಬ್ರವರಿ 3 ರಂದು ಡಿಸಿಎಂ ಡಿ ಕೆ ಶಿವಕುಮಾರ್ ನಿವಾಸದಲ್ಲಿ ನಿಯೋಗದಿಂದ ಮನವಿ ಪತ್ರ ಅರ್ಪಿಸಲಾಗಿದೆ.

ಈ ವೇಳೆ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ, ಹೊನ್ನಾಳ್ಳಿ ಕ್ಷೇತ್ರದ ಶಾಸಕ ಶಾಂತನಗೌಡ, ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ, ಮಾಯಕೊಂಡ ಬಸವಂತಪ್ಪ, ಹರಪನಹಳ್ಳಿ ಲತಾ ಮಲ್ಲಿಕಾರ್ಜುನರವರು ಉಪಸ್ಥಿತರಿದ್ದರು.

ಭದ್ರಾ ಆಣೆಕಟ್ಟು ಮತ್ತು ಅಚ್ಚುಕಟ್ಟು ಪ್ರದೇಶದ ಭದ್ರಾ ಯೋಜನಾ ವೃತ್ತದ ಆಡಳಿತವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸಬಾರದು. ಹಾಲಿ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ನಿಯೋಗ ಮನವಿ ಮಾಡಿದೆ.

ನಿಯೋಗದ ಮನವಿ ಆಲಿಸಿದ ನಂತರ ಡಿಸಿಎಂ ಮಾತನಾಡಿ, ಸಂಬಂಧಿಸಿದ ಸಚಿವರು ಹಾಗೂ ಇಲಾಖಾ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ರೈತ ಸಂಘ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Petition to Deputy CM Opposing Inclusion of Bhadra Dam Division into Visvesvaraya Jala Nigam

Shivamogga, February 03: Legislators and farmer leaders submitted a petition to Deputy Chief Minister D.K. Shivakumar, urging that the Bhadra Reservoir Project Division should not be merged into the jurisdiction of Visvesvaraya Jala Nigam.

Present at the occasion were State Farmers’ Association President H.R. Basavarajappa, Honalli MLA Shantanagouda, Channagiri MLA Basavaraj Shivaganga, Mayakonda Basavantappa, Harapanahalli MLA Latha Mallikarjun  and leader nagaraj gowda.

The delegation requested that the administration of the Bhadra Dam and its command area under the Bhadra Project Division should not be handed over to Visvesvaraya Jala Nigam. They insisted that the current administrative system should remain unchanged.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →