shimoga news | ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರ ಕಾರ್ಯಾಚರಣೆ : ಅಂತಾರಾಜ್ಯ ಸರಗಳ್ಳರ ಬಂಧನ!

Shivamogga Vinobanagar Police Operation: Arrest of Interstate Burglars! ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರ ಕಾರ್ಯಾಚರಣೆ : ಅಂತಾರಾಜ್ಯ ಸರಗಳ್ಳರ ಬಂಧನ!

ಶಿವಮೊಗ್ಗ (shivamogga), ಫೆಬ್ರವರಿ 09: ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ, ಮೂವರು ಅಂತಾರಾಜ್ಯ ಸರಗಳ್ಳರನ್ನು ಬಂಧಿಸಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ತಮಿಳುನಾಡು ರಾಜ್ಯದ ಕೊಯಮತ್ತೂರಿನ ಅರಸು ಯಾನೆ ವಲ್ಲರಸು (25), ಬೆಂಗಳೂರಿನ ಗೋರಿಪಾಳ್ಯದ ಕಾಲು ಯಾನೆ ಇಬ್ರಾಹಿಂ ಪಾಶಾ ಯಾನೆ ಇಬ್ರಾಹಿಂ ಬಾಶಾ (30) ಹಾಗೂ ಅತ್ತಿಬೆಲೆ ಎಡವನಹಳ್ಳಿ ನಿವಾಸಿ ಕೇಶವನ್ (43) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಆರೋಪಿಗಳಾದ ವಲ್ಲರಸು ಹಾಗೂ ಇಬ್ರಾಹಿಂನಿಂದ 4.80 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಬಂಗಾರದ ಗಟ್ಟಿ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ.

ಮತ್ತೋರ್ವ ಆರೋಪಿ ಕೇಶವನ್ ಕಡೆಯಿಂದ, 8.50 ಲಕ್ಷ ರೂ. ಮೌಲ್ಯದ 70 ಗ್ರಾಂ ತೂಕದ ಮಾಂಗಲ್ಯ ಸರ, 10.20 ಲಕ್ಷ ರೂ. ಮೌಲ್ಯದ 60 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳಿಂದ ಒಟ್ಟಾರೆ ಮೌಲ್ಯ 25 ಲಕ್ಷ ರೂ.ಗಳಾಗಿದೆ ಎಂದು ತಿಳಿಸಿದೆ.

ಎಸ್ಪಿ ನಿಖಿಲ್ ಬಿ, ಹೆಚ್ಚುವರಿ ಎಸ್ಪಿ ಕಾರಿಯಪ್ಪ, ರಮೇಶ್, ಡಿವೈಎಸ್ಪಿ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಡಿ ಕೆ ಉಸ್ತುವಾರಿಯಲ್ಲಿ, ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಜಿ, ಸಿಬ್ಬಂದಿಗಳಾದ ರಾಜು, ಚಂದ್ರಾನಾಯ್ಕ್, ಮಲ್ಲಪ್ಪ ಎಸ್ ಜಿ, ಅರುಣ್ ಕುಮಾರ್ ಎನ್ ಕೆ, ಮನು ಶಂಕರ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Shivamogga Vinobanagar Police Operation: Arrest of Interstate Burglars!

Shivamogga, February 09: In a major operation carried out by the Vinobanagar Police Station in Shivamogga, three interstate burglars have been arrested. Gold ornaments worth lakhs of rupees have been seized.

The arrested accused have been identified as Arasu alias Vallarasu (25) from Coimbatore, Tamil Nadu; Kaalu alias Ibrahim Pasha alias Ibrahim Basha (30) from Goripalya, Bengaluru; and Keshavan (43), a resident of Edavanahalli, Attibele.

From the accused Vallarasu and Ibrahim, 40 grams of gold bar worth ₹4.80 lakh and a Pulsar bike used in the crime were seized.

From the other accused Keshavan, a mangalya chain weighing 70 grams worth ₹8.50 lakh and gold ornaments weighing 60 grams worth ₹10.20 lakh were seized. The total value of the seized items is ₹25 lakh, it was informed.

Under the guidance of SP Nikhil B, Additional SP Kariyappa, Ramesh, and DySP Sanjeev Kumar, Vinobanagar Police Station Inspector Santosh Kumar D.K., Sub-Inspector Thirumalesh G, and staff members Raju, Chandranayak, Mallappa S.G., Arun Kumar N.K., and Manu Shankar succeeded in arresting the accused.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →