ಶಿವಮೊಗ್ಗ (shivamogga), ಮಾರ್ಚ್ 30: ಶಿವಮೊಗ್ಗ ನಗರದ ಹೊರವಲಯ ಸೋಗಾನೆ ಗ್ರಾಮದಲ್ಲಿರುವ ವಿಮಾನ ನಿಲ್ದಾಣ ಆವರಣಕ್ಕೆ ಕರಡಿಯೊಂದು ನುಗ್ಗಿದ ಘಟನೆ ಮಾರ್ಚ್ 30 ರ ಬೆಳಿಗ್ಗೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಿಗ್ಗೆ 9 ಗಂಟೆ ಸರಿಸುಮಾರಿಗೆ ಕರಡಿಯು ವಿಮಾನ ನಿಲ್ದಾಣ ಕಾಂಪೌಂಡ್ ಏರಿ ಒಳಾವರಣ ಪ್ರವೇಶಿಸಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದೆ.
ಕರಡಿ ಪ್ರವೇಶದ ವಿಷಯ ತಿಳಿಯುತ್ತಿದ್ದಂತೆ ವಿಮಾನ ನಿಲ್ದಾಣ ಸಿಬ್ಬಂದಿಗಳು ಅಲರ್ಟ್ ಆಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕರಡಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸದರಿ ಕರಡಿಯು ಮತ್ತೋಡು ಸಮೀಪದ ಅರಣ್ಯದಿಂದ ಆಗಮಿಸಿದ್ದು, ಕಾಚಿನಕಟ್ಟೆ ಮೂಲಕ ವಿಮಾನ ನಿಲ್ದಾಣ ಆವರಣಕ್ಕೆ ಆಗಮಿಸಿದೆ ಎಂದು ತಿಳಿದುಬಂದಿದೆ.
Bear enters Shivamogga Airport premises!
Shivamogga, March 30: An incident occurred on the morning of March 30 when a bear entered the premises of the airport located at Sogane village on the outskirts of Shivamogga city.
Around 9 a.m., the bear reportedly climbed over the airport compound wall and entered the premises. A video related to this incident has been circulating.
As soon as the airport staff learned about the bear’s entry, they went on alert. Forest department officials and staff rushed to the spot and have launched a search operation for the bear.
It is said that the bear came from the forest near Mathodu and entered the airport premises through Kachinakatte.

