ಭದ್ರಾವತಿ (bhadravathi), ಏಪ್ರಿಲ್ 28: ಸರಿಸುಮಾರು 12 ಅಡಿ ಆಳದ ಗುಂಡಿಯೊಂದಕ್ಕೆ ಬಿದ್ದು ಸಂಕಷ್ಟಕ್ಕೆ ಸಿಲುಕಿದ್ದ ಹೋರಿಯೊಂದನ್ನು, ಅಗ್ನಿಶಾಮಕ ದಳದ ತಂಡ ರಕ್ಷಣೆ ಮಾಡಿದ ಘಟನೆ ಭದ್ರಾವತಿ ನಗರದ ಹೊಸಮನೆ ಬಡಾವಣೆಯ ಭೋವಿ ಕಾಲೋನಿಯಲ್ಲಿ ಏಪ್ರಿಲ್ 28 ರಂದು ನಡೆದಿದೆ.
ನಿರ್ಮಾಣ ಹಂತದ ಮನೆಯೊಂದರ ಬಳಿ ಸದರಿ ಗುಂಡಿ ತೆಗೆಯಲಾಗಿತ್ತು. ಆಕಸ್ಮಿಕವಾಗಿ ಗುಂಡಿಯಲ್ಲಿ ಹೋರಿ ಬಿದ್ದಿತ್ತು. ಸಾರ್ವಜನಿಕರ ಮಾಹಿತಿಗೆ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ನೆರವಿನೊಂದಿಗೆ ಸುರಕ್ಷಿತವಾಗಿ ಹೋರಿಯನ್ನು ಮೇಲಕ್ಕೇತ್ತುವಲ್ಲಿ ಸಫಲರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಭದ್ರಾವತಿ ಅಗ್ನಿಶಾಮಕ ದಳ ಕಚೇರಿಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಹುಲಿಯಪ್ಪ ಸಿ ಹೆಚ್, ಬಾಬು, ಶ್ರೀನಿವಾಸ್, ಸುರೇಶ್, ಮಹೇಂದ್ರ, ವೀರೇಶ್, ಹರೀಶ್ ಭಾಗಿಯಾಗಿದ್ದರು.
Bhadravati: Fire brigade rescues cattle that fell into a 12-foot deep pit!
Bhadravati, April 28: An incident occurred on April 28 in Bhovi Colony of Hosamane Layout of Bhadravati city when a team of fire brigade rescued a bull that had fallen into a pit about 12 feet deep and was in distress.
The pit was dug near a house under construction. The bull had accidentally fallen into the pit. The fire brigade personnel who reached the spot on the information of the public were successful in safely lifting the bull out with the help of locals.
Assistant Fire Station Officer Huliyappa CH, Babu, Srinivas, Suresh, Mahendra, Veeresh, Harish were involved in the operation.

