ಶಿವಮೊಗ್ಗ (shivamogga), ಮೇ 06 : ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರೆತ ಮಾಹಿತಿಯಂತೆ ಮೇ 05 ರಂದು ಮಂಗಳೂರು ಕದ್ರಿ ಉದ್ಯಾನವನದ ಬಳಿಯಲ್ಲಿ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಮೂರು ಜನ ಚಿಪ್ಪು ಹಂದಿಯ ಚಿಪ್ಪುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ದಾಳಿ ಮಾಡಿ ಬಂದಿಸಿದ್ದಾರೆ.
ಬೆಂಗಳೂರು ದಕ್ಷಿಣದ ಹೆಚ್.ಆರ್. ಜಗದೀಶ, ಕನಕಪುರದ ಸಿದ್ದುನಾಯ್ಕ ಹಾಗೂ ಬೆಂಗಳೂರು ಬನಶಂಕರಿ 2ನೇ ಹಂತದ ಬಾಬು ಟಿಪ್ಪು ಸಾಬ್ ಇವರುಗಳು ಮಾರಾಟ ಮಾಡಲು ಕಾರಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ 5.200 ಕಿ. ಗ್ರಾಂ ಚಿಪ್ಪು ಹಂದಿಯ ಚಿಪ್ಪುಗಳನ್ನು ಮತ್ತು ಸ್ವಿಫ್ಟ್ ಕಾರ್‌ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.
ಬೆಂಗಳೂರು ಸಿ.ಐ.ಡಿ. ಅರಣ್ಯ ಘಟಕದ ಪೊಲೀಸ್ ಮಹಾನಿರೀಕ್ಷಕರು, ಮಡಿಕೇರಿ ಸಿ.ಐ.ಡಿ. ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರು ಇವರುಗಳ ಮಾರ್ಗದರ್ಶನಲ್ಲಿ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ.ಆರ್. ಮತ್ತು ಸಿಬ್ಬಂದಿಗಳಾದ ತಾರನಾಥ ಎಸ್. ಹಾಗೂ ಅಬ್ದುಲ್ ರವೂಫ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅರಣ್ಯ ಕಾಯ್ದೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಗೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕ ಪೊಲೀಸ್ ಅಧೀಕ್ಷಕರ ಕಚೇರಿ ದೂ.ಸಂ.: 9480800220 ಹಾಗೂ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರ ಕಚೇರಿ ದೂ.ಸಂ.: 9480803394ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾಗರ ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Appeal to provide information about illegal activities related to the Forest and Wildlife Protection Act
Shivamogga, May 06: According to information received by the Mangaluru CID Police Forest Mobile Police, on May 05, three people in a Maruti Swift car were arrested near Kadri Park in Mangaluru who were trying to sell porcupine shells illegally.
H.R. Jagadeesh of Bangalore South, Siddu Nayak of Kanakapura and Babu Tipu Saab of Banashankari 2nd stage, Bangalore. They were arrested after illegally storing 5.200 kg porcupine shells in the car for sale and the Swift car was seized, a case was registered and the accused were remanded in judicial custody.
Bangalore CID Forest Unit Inspector General of Police, Madikeri CID Under the guidance of the Forest Unit Superintendent of Police Pawan Nejjur, the Mangalore CID Police Forest Patrol Division Police Sub-Inspector Dilip G.R. and staff members Taranath S. and Abdul Rauf participated in this operation.
If any illegal activities related to the Forest Act and the Wildlife Protection Act are found, please contact the Madikeri CID Forest Unit Police Superintendent’s Office at Tel. No.: 9480800220 and the CID Police Forest Patrol Division Sagar Office at Tel. No.: 9480803394 and provide information, the Sagar CID Police Forest Patrol Division Police Sub-Inspector said in a statement.

