Tirthahalli : Ganja in the arecanut plantation! ತೀರ್ಥಹಳ್ಳಿ : ಅಡಕೆ ತೋಟದಲ್ಲಿ ಗಾಂಜಾ!

ತೀರ್ಥಹಳ್ಳಿ : ಅಡಕೆ ತೋಟದಲ್ಲಿ ಗಾಂಜಾ!

ತೀರ್ಥಹಳ್ಳಿ (thirthahalli), ಜೂ. 12: ಅಡಕೆ ತೋಟವೊಂದರಲ್ಲಿ ಗಾಂಜಾ (ganja) ಗಿಡಗಳನ್ನು ಬೆಳೆದಿದ್ದ ಪ್ರಕರಣವೊಂದನ್ನು ಪೊಲೀಸರು ಪತ್ತೆ ಹಚ್ಚಿದ ಘಟನೆ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹುತ್ತಳ್ಳಿ ಗ್ರಾಮದಲ್ಲಿ ನಡೆದಿದೆ.

ಖಚಿತ ವರ್ತಮಾನದ ಮೇರೆಗೆ ಜೂನ್ 11 ರಂದು ತೀರ್ಥಹಳ್ಳಿ ಪೊಲೀಸರು (thirthahalli police) ಕಾರ್ಯಾಚರಣೆ ನಡೆಸಿದ್ದಾರೆ. ತೋಟದ ವಿವಿಧೆಡೆ ಅಡಕೆ ಗಿಡಗಳ (arecanut plants) ನಡುವೆ ಬೆಳೆಯಲಾಗಿದ್ದ 14 ಹಸಿ ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಒಟ್ಟಾರೆ 9 ಕೆಜಿ 524 ಗ್ರಾಂ ತೂಕದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಲಾಗಿದ್ದು, ಇದರ ಮೌಲ್ಯ 2 ಲಕ್ಷ 50 ಸಾವಿರ ರೂ.ಗಳಾಗಿದೆ ಎಂದು ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಅದೇ ಗ್ರಾಮದ ರೈತರೋರ್ವರು, ತಮ್ಮ ಮನೆಯ ಹಿಂಭಾಗದ ಅಡಕೆ ತೋಟದಲ್ಲಿ ಗುಪ್ತವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದರು. ಎಸ್ಪಿ (sp) ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ (asp)ಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರಿಯಪ್ಪ ಮಾರ್ಗದರ್ಶನದಲ್ಲಿ

ತೀರ್ಥಹಳ್ಳಿ ಡಿವೈಎಸ್ಪಿ (dysp) ಗಜಾನನ ವಾಮನ ಸುತಾರ ನೇತೃತ್ವದ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆ (thirthahalli police station) ಯಲ್ಲಿ ಆರೋಪಿತ ವ್ಯಕ್ತಿಯ ವಿರುದ್ದ ಎನ್.ಡಿ.ಪಿ.ಎಸ್ (ndps) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Shimoga - Bhadravati Urban Development Authority road encroachment! : Leaders warning ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದಲೇ ರಸ್ತೆ ಒತ್ತುವರಿ! : ಮುಖಂಡರ ಎಚ್ಚರಿಕೆ Previous post ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದಲೇ ರಸ್ತೆ ಒತ್ತುವರಿ! :  ಮುಖಂಡರ ಎಚ್ಚರಿಕೆ
Sakhi is a one stop center with many solutions under one roof for distressed women ಸಂಕಷ್ಟದಲ್ಲಿರುವ ಮಹಿಳೆಯರಿಗೆ ಒಂದೇ ಸೂರಿನಡಿ ಹಲವು ಪರಿಹಾರ ಕಲ್ಪಿಸುವ 'ಸಖಿ' ಒನ್ ಸ್ಟಾಪ್ ಸೆಂಟರ್ ವಿಶೇಷ ಲೇಖನ : ರಘು ಆರ್, ಅಪ್ರೆಂಟಿಸ್, ವಾರ್ತಾ ಇಲಾಖೆ Next post ಸಂಕಷ್ಟದಲ್ಲಿರುವ ಮಹಿಳೆಯರಿಗೆ ಒಂದೇ ಸೂರಿನಡಿ ಹಲವು ಪರಿಹಾರ  ‘ಸಖಿ’ ಒನ್ ಸ್ಟಾಪ್ ಸೆಂಟರ್