Modi Govt - 3.0 : Will MP B.Y. Raghavendra Chitta flow towards important projects in Shimoga? ಮೋದಿ ಸರ್ಕಾರ - 3.0 : ಶಿವಮೊಗ್ಗದ ಪ್ರಮುಖ ಯೋಜನೆಗಳತ್ತ ಹರಿಯುವುದೆ ಸಂಸದ ಬಿ.ವೈ.ರಾಘವೇಂದ್ರ ಚಿತ್ತ? ವರದಿ : ಬಿ. ರೇಣುಕೇಶ್ reporter : b.renukesha

ಮೋದಿ ಸರ್ಕಾರ –  3.0 : ಶಿವಮೊಗ್ಗದ ಪ್ರಮುಖ ಯೋಜನೆಗಳತ್ತ ಹರಿಯುವುದೆ ಸಂಸದ ಬಿ.ವೈ.ರಾಘವೇಂದ್ರ ಚಿತ್ತ?

ಶಿವಮೊಗ್ಗ (shivamogga), ಜೂ. 15: ಶಿವಮೊಗ್ಗ ಕ್ಷೇತ್ರದಿಂದ (shimoga lok sabha constituency) ಈ ಹಿಂದೆ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಮೋದಿ ಸರ್ಕಾರ –  3.0 : ಶಿವಮೊಗ್ಗದ ಪ್ರಮುಖ ಯೋಜನೆಗಳತ್ತ ಹರಿಯುವುದೆ ಸಂಸದ ಬಿ.ವೈ.ರಾಘವೇಂದ್ರ ಚಿತ್ತ? (b y raghavendra) ಅವರು, ತಮ್ಮ ಅಧಿಕಾರಾವಧಿಯಲ್ಲಿ ಕೇಂದ್ರ ಸರ್ಕಾರದಿಂದ (central govt) ಹಲವು ಅಭಿವೃದ್ದಿ ಯೋಜನೆಗಳು ಸೇರಿದಂತೆ ಆಡಳಿತಾತ್ಮಕ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಕಾರ್ಯಗತಗೊಳಿಸಿದ್ದರು.

ಇದೀಗ ನಾಲ್ಕನೇ ಬಾರಿ ಬಿ.ವೈ.ರಾಘವೇಂದ್ರ ಲೋಕಸಭೆ (loksabhe) ಪ್ರವೇಶಿಸಿದ್ದಾರೆ. ಜೊತೆಗೆ ಬಿಜೆಪಿ (bjp) ನೇತೃತ್ವದ ಎನ್.ಡಿ.ಎ (nda) ಸರ್ಕಾರವೇ ಅಧಿಕಾರದಲ್ಲಿದೆ. ಇದರಿಂದ ಮೋದಿ ಸರ್ಕಾರದ 3.0 (modi govt 3.0) ಅವಧಿಯಲ್ಲಿಯೂ, ಶಿವಮೊಗ್ಗ ಕ್ಷೇತ್ರದಲ್ಲಿ ಈ ಹಿಂದಿನ ರೀತಿಯಲ್ಲಿಯೇ ಅಭಿವೃದ್ದಿ ಕಾಮಗಾರಿಗಳು ಸೇರಿದಂತೆ ಆಡಳಿತಾತ್ಮಕ ನಿರ್ಧಾರಗಳು ಅನುಷ್ಠಾನಗೊಳ್ಳುವ ನಿರೀಕ್ಷೆ ನಾಗರೀಕರಲ್ಲಿದೆ.

ಪ್ರಸ್ತುತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಆಗಬೇಕಾಗಿರುವ ವಿವಿಧ ಕೆಲಸಕಾರ್ಯಗಳ ಕುರಿತಂತೆ ನಾಗರೀಕ ವಲಯದಿಂದ ಹಾಗೂ ವಿವಿಧ ಸಂಘಸಂಸ್ಥೆಗಳ ಪ್ರಮುಖರಿಂದ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅವುಗಳ ವಿವರ ಈ ಮುಂದಿನಂತಿದೆ. (www.udayasaakshi.com News website)

ಬೇಡಿಕೆಗಳು : ಭದ್ರಾವತಿ ವಿಐಎಸ್’ಎಲ್ ಕಾರ್ಖಾನೆ (visl factory) ಪುನಶ್ಚೇತನಕ್ಕೆ ಆದ್ಯತೆ ಸಿಗಬೇಕಾಗಿದೆ. ರಾಜ್ಯದವರೇ ಆದ ಹೆಚ್.ಡಿ.ಕುಮಾರಸ್ವಾಮಿ (h d kumaraswamy) ಕೇಂದ್ರ ಕೈಗಾರಿಕಾ ಸಚಿವರಾಗಿದ್ದಾರೆ. ಆದ್ಯತೆಯ ಮೇಲೆ ಕಾರ್ಖಾನೆಗೆ ಅಗತ್ಯ ಬಂಡವಾಳ ತೊಡಗಿಸುವ ನಿಟ್ಟಿನಲ್ಲಿ ಕ್ರಮವಾಗಬೇಕಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (shivamogga airport) ರಾತ್ರಿ ವೇಳೆ ವಿಮಾನಗಳ ಲ್ಯಾಂಡಿಂಗ್ ವ್ಯವಸ್ಥೆ ವ್ಯವಸ್ಥೆ, ಕಾರ್ಗೋ (cargo planes ಸರಕು-ಸಾಗಾಣೆ) ವಿಮಾನಗಳ ಸಂಚಾರ, ಮುಂಬೈ – ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಆರಂಭಕ್ಕೆ ಕ್ರಮವಾಗಬೇಕಾಗಿದೆ.

ಬೆಂಗಳೂರು – ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು (vande bharat train) ಸಂಚಾರಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಪ್ರಯಾಣದ ಅವಧಿ ಮತ್ತಷ್ಟು ಕಡಿಮೆಯಾಗಲಿದೆ. ಕೋಚಿಂಗ್ ಡಿಪೋ (coachin depo) ಕಾಮಗಾರಿ, ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ವೇಗ ದೊರಕಬೇಕಾಗಿದೆ. ಶಿವಮೊಗ್ಗದಿಂದ ಹೊಸ ರೈಲುಗಳ ಸಂಚಾರ. ಹೊಸದಾಗಿ ಫ್ಲೈ ಓವರ್, ಅಂಡರ್ ಪಾಸ್ ಗಳ ನಿರ್ಮಾಣಕ್ಕೆ ಕ್ರಮವಾಗಬೇಕಾಗಿದೆ. (www.udayasaakshi.com News website)

ಶಿವಮೊಗ್ಗ ನಗರದ (shimoga city) ಹೊರವಲಯದಲ್ಲಿ 33 ಕಿ.ಮೀ. ಉದ್ದದ ಬೈಪಾಸ್ ರಸ್ತೆ (ಔಟರ್ ರಿಂಗ್ ರೋಡ್) ನಿರ್ಮಾಣದಲ್ಲಿ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಎರಡನೇ ಹಂತದ ಕಾಮಗಾರಿಗೆ ಇನ್ನೂ ಅನುಮತಿ ದೊರಕಿಲ್ಲವಾಗಿದೆ. ಇದಕ್ಕೆ ಸಂಬಂಧಿಸಿದ ಕಡತ ಧೂಳು ಹಿಡಿಯಲಾರಂಭಿಸಿದ್ದು, ಕಾಲಮಿತಿಯೊಳಗೆ ವರ್ತುಲ ರಸ್ತೆ (outer ring road) ಕಾಮಗಾರಿ ಪೂರ್ಣಕ್ಕೆ ಚಿತ್ತ ಹರಿಸಬೇಕಾಗಿದೆ.

ಎಫ್.ಎಂ. ರೇಡಿಯೋ ಕೇಂದ್ರಕ್ಕೆ (fm radio centre) ಪೂರ್ಣ ಪ್ರಮಾಣದಲ್ಲಿ ಚಾಲನೆ, ಬೆಂಗಳೂರು – ಮುಂಬೈ ಕೈಗಾರಿಕಾ ಕಾರಿಡಾರ್ ನಲ್ಲಿ ಶಿವಮೊಗ್ಗ ಸೇರ್ಪಡೆ, ಸಿಗಂದೂರು ಸೇತುವೆ (sigandur bridge) ನಿರ್ಮಾಣ ಕಾಮಗಾರಿಗೆ ವೇಗ, ರಾಷ್ಟ್ರೀಯ ಹೆದ್ದಾರಿಗಳಿಗೆ (national highway) ಸಂಪರ್ಕಿಸುವ ರಾಜ್ಯ ಹೆದ್ದಾರಿಗಳ ಅಭಿವೃದ್ದಿಗೆ ವಿಶೇಷ ಅನುದಾನ, (www.udayasaakshi.com News website)

ಜಿಲ್ಲೆಯ ಪ್ರವಾಸೋದ್ಯಮ (tourisam) ಅಭಿವೃದ್ದಿಗೆ ವಿಶೇಷ ಪ್ಯಾಕೇಜ್, ಪಾಸ್ ಪೋರ್ಟ್ ಕೇಂದ್ರ (passport cetre) ಮೇಲ್ದರ್ಜೆಗೇರಿಸುವುದು, ಉದ್ಯೋಗಾವಕಾಶ ಸೃಷ್ಟಿ, ಇಎಸ್ಐ ಆಸ್ಪತ್ರೆ (esi hosptial) ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಾರಂಭಕ್ಕೆ ಕ್ರಮ ಸೇರಿದಂತೆ ಕೇಂದ್ರ ಸರ್ಕಾರದ ಹಂತದಲ್ಲಿನ ಹಲವು ಯೋಜನೆ ಹಾಗೂ ಕಾಮಗಾರಿಗಳ ಅನುಷ್ಠಾನಕ್ಕೆ ಸಂಸದರು ಆಸಕ್ತಿವಹಿಸಬೇಕಾಗಿದೆ ಎಂಬುವುದು ನಾಗರೀಕರ ಸಲಹೆಯಾಗಿದೆ.

  • ಬೆಂಗಳೂರು – ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಕ್ರಮ
  • ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಕ್ರಮ
  • ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ
  • ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆಗೆ ಅವಕಾಶ
  • ದೇಶದ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಆರಂಭಕ್ಕೆ ಕ್ರಮ
  • ಶಿವಮೊಗ್ಗದಲ್ಲಿ ಎರಡನೇ ಹಂತದ ವರ್ತುಲ ರಸ್ತೆ ನಿರ್ಮಾಣ
  • ರೈಲ್ವೆ, ಹೆದ್ಧಾರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು
  • ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಕ್ಕೆ ಕ್ರಮ (www.udayasaakshi.com News website)

ಶಿವಮೊಗ್ಗ ಜಿಲ್ಲೆಯ ಮತ್ತಷ್ಟು ಅಭಿವೃದ್ದಿ ನಿರೀಕ್ಷೆ : ಎನ್.ಗೋಪಿನಾಥ್

*** ಬಿ.ವೈ.ರಾಘವೇಂದ್ರ ಅವರು ಸಂಸದರಾಗಿದ್ದ ಮೂರು ಅವಧಿಯಲ್ಲಿಯೂ ಕೇಂದ್ರ ಸರ್ಕಾರದಿಂದ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಶಿವಮೊಗ್ಗ ಕ್ಷೇತ್ರದಲ್ಲಿ ಕಾರ್ಯಗತಗೊಳಿಸಿದ್ದಾರೆ. ಹಾಗೆಯೇ ರಾಜ್ಯ ಸರ್ಕಾರದಿಂದಲೂ ಹಲವು ಯೋಜನೆಗಳನ್ನು ಅನುಷ್ಠಾಗೊಳಿಸಿದ್ದಾರೆ. ಇದೀಗ ಅವರು ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರದಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದರಿಂದ ಸಂಸದ ಬಿ.ವೈ.ರಾಘವೇಂದ್ರ ಅವರ ಅಧಿಕಾರಾವಧಿಯಲ್ಲಿ ಜಿಲ್ಲೆಯು ಮತ್ತಷ್ಟು ಅಭಿವೃದ್ದಿಯಾಗುವ ನಿರೀಕ್ಷೆಯಿದೆ’ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅವರು ಅಭಿಪ್ರಾಯಪಡುತ್ತಾರೆ. (www.udayasaakshi.com News website)

Shimoga - Ganja case: 10 years rigorous imprisonment for four youths! ಶಿವಮೊಗ್ಗ - ಗಾಂಜಾ ಕೇಸ್ : ನಾಲ್ವರು ಯುವಕರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ! Previous post ಶಿವಮೊಗ್ಗ – ಗಾಂಜಾ ಕೇಸ್ : ನಾಲ್ವರು ಯುವಕರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ!
CM Siddaramaiah supports petrol-diesel price hike ಪೆಟ್ರೋಲ್ - ಡೀಸೆಲ್ ದರ ಏರಿಕೆ ಸರ್ಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ Next post ಪೆಟ್ರೋಲ್ – ಡೀಸೆಲ್ ದರ ಏರಿಕೆ ಸರ್ಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ