ಶಿವಮೊಗ್ಗ – ಪೊಲೀಸರ ಮೇಲೆ ಚಾಕುವಿನಿಂದ ದಾಳಿ : ರೌಡಿ ಶೀಟರ್ ಕಾಲಿಗೆ ಗುಂಡೇಟು!
ಶಿವಮೊಗ್ಗ (shivamogga), ಜು. 9: ವ್ಯಕ್ತಿಯೋರ್ವರ ಕೊಲೆಗೆ ಯತ್ನಿಸಿದ (attempt to murder) ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ (rowdy sheeter) ಓರ್ವನ ಕಾಲಿಗೆ ಗುಂಡಿಕ್ಕಿ (gun shot) ಪೊಲೀಸರು ಬಂಧಿಸಿದ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (shimoga taluk kumsi police station limit) ಮಂಗಳವಾರ ಬೆಳಿಗ್ಗೆ ನಡೆದಿದೆ.
ಶಿವಮೊಗ್ಗದ (shimoga) ಜೆ.ಪಿ.ನಗರ ಬಡಾವಣೆ (j p nagara extension) ನಿವಾಸಿ ರಜಾಕ್ (23) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನ ವಿರುದ್ದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ (tunga nagara police station) ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ.
ಈ ಕುರಿತಂತೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ (shimoga sp g k mithun kumar) ಅವರು ಮಾಹಿತಿ ನೀಡಿದ್ದಾರೆ. ‘ಆರೋಪಿ ರಜಾಕ್ ವಿರುದ್ದ 5 ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ವ್ಯಕ್ತಿಯೋರ್ವರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದು, ನಂತರ ತಲೆಮರೆಸಿಕೊಂಡಿದ್ದ.
ಈತನ ಪತ್ತೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆ (holehonnuru police station) ಇನ್ಸ್’ಪೆಕ್ಟರ್ ನೇತೃತ್ವದ ತಂಡ ಯತ್ನಿಸಿದೆ. ಈ ವೇಳೆ ಈತ ಪೊಲೀಸ್ ಸಿಬ್ಬಂದಿ ಅರ್ಜುನ್ ಮೇಲೆಯೇ ಚಾಕುವಿನಿಂದ ದಾಳಿ (kinfe attack) ನಡೆಸಿದ್ದಾನೆ. ತಕ್ಷಣವೇ ಇನ್ಸ್’ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ಆತನಿಗೆ ಎಚ್ಚರಿಕೆ ನೀಡಿದ್ದಾರೆ.
ಆದಾಗ್ಯೂ ಆರೋಪಿ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ಗಾಯಗೊಂಡಿರುವ ಆರೋಪಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ (govt meggan hospital) ದಾಖಲಿಸಲಾಗಿದೆ’ ಎಂದು ಎಸ್ಪಿ (sp) ಅವರು ತಿಳಿಸಿದ್ದಾರೆ.
