
ಭದ್ರಾವತಿ : ಕಳ್ಳತನ ಪ್ರಕರಣ – ಇಬ್ಬರ ಬಂಧನ!
ಭದ್ರಾವತಿ (bhadravathi), ಜು. 9: ಅಂಗಡಿಯೊಂದರಲ್ಲಿ ನಗದು ಕಳವು (theft of cash) ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು (bhadravathi old town police station) ಬಂಧಿಸಿದ ಘಟನೆ ನಡೆದಿದೆ.
ಭದ್ರಾವತಿ ಯಕ್ಸಿನಾ ಕಾಲೋನಿ ನಿವಾಸಿ ಸೈಯದ್ ಹುಸೇನ್ ಯಾನೆ ಜಂಗ್ಲಿ (19) ಹಾಗೂ ಸೈಯದ್ ಇರ್ಫಾನ್ ಯಾನೆ ಕಾಲು (21) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಇವರಿಬ್ಬರು 17-6-2024 ರಂದು ರಾತ್ರಿ ಭದ್ರಾವತಿ ಪಟ್ಟಣದ ಓಎಸ್ಎಂ ರಸ್ತೆಯ ಶ್ರೀ ಮಂಜುನಾಥ ಆಟೋ ಸ್ಪೇರ್ಸ್ ಅಂಗಡಿಯ ರೋಲಿಂಗ್ ಶೆಟರ್ ಲಾಕ್ ಮುರಿದು ಒಳ ಪ್ರವೇಶಿಸಿ, ಡ್ರಾದಲ್ಲಿದ್ದ ನಗದು ಹಣ ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ಪತ್ತೆಗಾಗಿ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ (sp g k mithun kumar) ಅವರು ತನಿಖಾ ತಂಡ (Investigation team) ರಚಿಸಿದ್ದರು. ಸದರಿ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಗಿದ್ದು, ಕಳವು ಮಾಡಿದ್ದ 40 ಸಾವಿರ ರೂ. ವಶಕ್ಕೆ ಪಡೆದುಕೊಂಡಿದೆ.
ಭದ್ರಾವತಿ ಡಿವೈಎಸ್ಪಿ (dysp) ಗಜಾನನ ವಾಮನ ಸುತಾರ, ಸರ್ಕಲ್ ಇನ್ಸ್’ಪೆಕ್ಟರ್ (circle inspector) ಶ್ರೀಶೈಲಕುಮಾರ್ ಮೇಲ್ವಿಚಾರಣೆಯಲ್ಲಿ ಪಿಎಸ್ಐ (psi) ಶರಣಪ್ಪ, ಸಿಬ್ಬಂದಿಗಳಾದ ಹೆಚ್.ಸಿ.ಹಾಲಪ್ಪ, ಪಿಸಿಗಳಾದ ನಾರಾಯಣಸ್ವಾಮಿ, ಮೌನೇಶ್ ಶೀಕಲ್, ಚಿಕ್ಕಪ್ಪ ಎಸ್ ಮತ್ತು ಪ್ರವೀಣ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.