
ಜೋಗ ಜಲಪಾತದ ಬಳಿ ಬೆಂಗಳೂರಿನಿಂದ ಆಗಮಿಸಿದ್ದ ಯುವಕ ಕಣ್ಮರೆ!
ಜೋಗಫಾಲ್ಸ್ (jogfalls), ಜು. 21: ವಿಶ್ವವಿಖ್ಯಾತ ಜೋಗ ಜಲಪಾತ (jogfalls) ವೀಕ್ಷಣೆಗೆಂದು ಬೆಂಗಳೂರಿನಿಂದ (bengaluru) ಆಗಮಿಸಿದ್ದ ಯುವಕನೋರ್ವ ಜಲಪಾತದ ಬಳಿ ಕಣ್ಮರೆಯಾಗಿರುವ ಘಟನೆ ನಡೆದಿದ್ದು, ಯುವಕನಿಗಾಗಿ ಕಾರ್ಗಲ್ ಠಾಣೆ ಪೊಲೀಸರು (kargal police station) ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೂಲತಃ ಗದಗ (gadag) ಜಿಲ್ಲೆಯ ನಿವಾಸಿಯಾದ, ಪ್ರಸ್ತುತ ಬೆಂಗಳೂರಿನಲ್ಲಿ (bengaluru city) ಟೀ ಅಂಗಡಿ ನಡೆಸುತ್ತಿರುವ ಆನಂದ್ (24) ಜಲಪಾತದ (water falls) ಬಳಿ ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಕಾರ್ಗಲ್ ಠಾಣೆ ಪೊಲೀಸರು ನಾಪತ್ತೆ (missing) ದೂರು ದಾಖಲಿಸಿಕೊಂಡು ಯುವಕನಿಗಾಗಿ ಜಲಪಾತದ ಬಳಿ ಶೋಧ ನಡೆಸುತ್ತಿದ್ದಾರೆ.
ನಿಗೂಢ : ಜು . 15 ರಂದು ಯುವಕ ಆನಂದ್ ಜೋಗ ಜಲಪಾತಕ್ಕೆ (jogfalls) ಆಗಮಿಸಿದ್ದ. ಯಾತ್ರಿ ನಿವಾಸದದ ಸೀತಾಕಟ್ಟೆ ಬ್ರಿಡ್ಜ್ (seethakatte bridge) ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿ ಆಗಮಿಸಿದ್ದ. ನಂತರ ಆತನ ಸುಳಿವು ಲಭ್ಯವಾಗಿಲ್ಲ.
ಯುವಕ ತಂದಿದ್ದ ಬ್ಯಾಗ್ ಸಿಕ್ಕಿದೆ. ಕಳೆದ 6 ದಿನಗಳಿಂದಲೂ ಯುವಕನಿಗಾಗಿ ಕಾರ್ಗಲ್ ಠಾಣೆ ಸಬ್ ಇನ್ಸ್’ಪೆಕ್ಟರ್ (sub inspector) ಹೊಳೆಬಸಪ್ಪ ಹೋಳಿ ನೇತೃತ್ವದ ಪೊಲೀಸ್ ತಂಡ ಶೋಧ (search) ಕಾರ್ಯ ನಡೆಸುತ್ತಿದೆ. ಆದರೆ ಸುಳಿವು ಲಭ್ಯವಾಗಿಲ್ಲ.
ಜೋಗ್ (jog) ಜಲಪಾತದ ಬಳಿ ಬೀಳುತ್ತಿರುವ ಭಾರೀ ಮಳೆ (heavy rainfall) ಹಾಗೂ ಮಂಜು ಮುಸುಕಿದ ವಾತಾವರಣದಿಂದ (Foggy weather), ಯುವಕನ ಶೋಧ ಕಾರ್ಯವು ಪೊಲೀಸರಿಗೆ ಕಷ್ಟಕರವಾಗಿ ಪರಿಣಮಿಸಿದೆ. ಜಲಪಾತದ ಬಳಿ ಯುವಕ ನಾಪತ್ತೆಯಾಗಿದ್ದ ಹೇಗೆ ಎಂಬುವ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.