
ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಕ್ಕೆ!
ಸಾಗರ (sagar), ಜು. 1: ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ (hydro power generation station) ಲಿಂಗನಮಕ್ಕಿ ಜಲಾಶಯದಿಂದ ಗುರುವಾರ ನೀರು ಹೊರ ಹರಿಸಲಾಗುತ್ತಿದೆ.
ಬೆಳಿಗ್ಗೆ ಮೂರು ಕ್ರಸ್ಟ್ ಗೇಟ್ ಗಳನ್ನು ತೆರೆದು ಸುಮಾರು 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ (rievr) ಹರಿಸಲಾಯಿತು (out flow). ಪ್ರಸ್ತುತ ಡ್ಯಾಂನ ಒಳಹರಿವು (inflow) 53,061 ಕ್ಯೂಸೆಕ್ ಒಳಹರಿವಿದೆ.
ಡ್ಯಾಂ (dam)ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭಾರೀ ಪ್ರಮಾಣದ ಒಳಹರಿವು (inflow) ಇರುವುದರಿಂದ ಡ್ಯಾಂ ಗರಿಷ್ಠ ಮಟ್ಟ ತಲುಪುದಕ್ಕೂ ಮುನ್ನವೇ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಡ್ಯಾಂನಿಂದ (linganamakki dam) ನೀರು ಹೊರ ಹರಿಸುವ ಮಾಹಿತಿ ತಿಳಿದ ನೂರಾರು ಸಾರ್ವಜನಿಕರು, ಜಲಧಾರೆ ವೀಕ್ಷಣೆಗೆ ಆಗಮಿಸಿದ್ದರು. ಡ್ಯಾಂನಿಂದ ನೀರು ಹೊರ ಬಿಡುತ್ತಿದ್ದಂತೆ ಚಪ್ಪಾಳೆ ತಟ್ಟಿ ಹರ್ಷೋದ್ಘಾರ ವ್ಯಕ್ತಪಡಿಸಿದರು.
ಜಲಾನಯನ ಪ್ರದೇಶ (catchment area) ವ್ಯಾಪ್ತಿಯಲ್ಲಿ ಬಿದ್ದ ಉತ್ತಮ ಮಳೆಯಿಂದ (heavy rainfall) ಲಿಂಗನಮಕ್ಕಿ ಡ್ಯಾಂ (linganamakki reservoir) ಗರಿಷ್ಠ ಮಟ್ಟಕ್ಕೆ ಬರುವಂತಾಗಿದೆ.
ಲಿಂಗಮನಕ್ಕಿ ಡ್ಯಾಂನಿಂದ ನೀರು ಹೊರಬಿಡುತ್ತಿರುವ ಕಾರಣದಿಂದ ಅಣೆಕಟ್ಟೆಯ ಕೆಳದಂಡೆಯ ಶರಾವತಿ ನದಿ (sharavati river) ಪಾತ್ರದ ನಿವಾಸಿಗಳಿಗೆ ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.
ಲಿಂಗನಮಕ್ಕಿ ಜಲಾಶಯವು ಸಾಗರ ತಾಲೂಕಿನಲ್ಲಿದೆ (sagar taluk). ಶರಾವತಿ ನದಿಗೆ ಅಣೆಕಟ್ಟು ನಿರ್ಮಿಸಲಾಗಿದೆ. 151. 52 ಟಿಎಂಸಿ (tmc) ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ದೇಶದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಪ್ರಮುಖ ಜಲಾಶಯವಾಗಿದೆ.