
ಮುಂಬೈನಲ್ಲಿ ಸ್ಟಾರ್ ಗಾಯಕಿ ಆಗಿದ್ದ ರಾಣು ಮಂಡಲ್ ಮತ್ತೆ ಕೊಲ್ಕತ್ತಾದಲ್ಲಿ ಭಿಕ್ಷುಕಿ..!
ಕೊಲ್ಕತ್ತಾ (kolkata), ಆ. 16: ಹಿಂದೊಮ್ಮೆ ಕೊಲ್ಕತ್ತಾ ರೈಲ್ವೆ ನಿಲ್ದಾಣದಲ್ಲಿ ಹಿಂದಿ ಸಿನಿಮಾ ಹಾಡುಗಳನ್ನು ಹೇಳುತ್ತಾ ಭಿಕ್ಷೆ ಬೇಡುತ್ತಿದ್ದ ರಾಣು ಮಂಡಲ್ (ranu mandal), ಸೋಶಿಯಲ್ ಮೀಡಿಯಾದ ಮೂಲಕ ವೈರಲ್ ಆಗಿದ್ದರು. ಮುಂಬೈನಲ್ಲಿ ಸ್ಟಾರ್ ಗಾಯಕಿಯಾಗಿ ಪರಿವರ್ತಿತರಾಗಿದ್ದರು. ಕೆಲ ದಿನಗಳಲ್ಲಿಯೇ ಇಡೀ ದೇಶದ ಗಮನ ಸೆಳೆದಿದ್ದರು!
ಬದಲಾದ ಸನ್ನಿವೇಶದಲ್ಲಿ ರಾಣು ಮಂಡಲ್ ಮತ್ತೆ ಕೊಲ್ಕತ್ತಾಗೆ ಹಿಂದಿರುಗಿದ್ದಾರೆ. ಭಿಕ್ಷೆ ಬೇಡಿ ಜೀವನ ನಡೆಸಲಾರಂಭಿಸಿರುವ ಮಾಹಿತಿಗಳು ಕೇಳಿಬಂದಿವೆ.
ಮುಂಬೈನಲ್ಲಿ ಬಾಡಿಗೆ ಮನೆಯೊಂದರಲ್ಲಿ ರಾಣು ಮಂಡಲ್ ನೆಲೆಸಿದ್ದರು. ಮನೆ ಬಾಡಿಗೆ ಕಟ್ಟಲಾರದೆ ವಾಪಾಸ್ ಕೊಲ್ಕತ್ತಾಗೆ ಆಗಮಿಸಿ, ಸಣ್ಣ ಮನೆಯೊಂದರಲ್ಲಿ ನೆಲೆಸಿದ್ದಾರೆ.
ರಾಣು ದಯನೀಯ ಸ್ಥಿತಿ ಗಮನಿಸಿ ಆಕೆಗೆ ನೆರವಾಗಲುಸ ಮನೆಗೆ ಆಗಮಿಸುವವರಿಗೆ ಸಿಹಿ ತಿಂಡಿ, ಬಿಸ್ಕೇಟ್, ದೈನಂದಿನ ಅಗತ್ಯ ವಸ್ತುಗಳನ್ನು ನೀಡುವಂತೆ ಕೇಳುತ್ತಿದ್ದಾರೆ. ಇವುಗಳನ್ನು ಕೊಡದಿದ್ದರೆ ಪೊರಕೆಯೊಂದಿಗೆ ಓಡಿಸಿಕೊಂಡು ಹೋಗುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸ್ಟಾರ್ ಗಾಯಕಿ : 2019 ರಲ್ಲಿ ರಾಣು ಮಂಡಲ್ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಭಿಕ್ಷೆ ಬೇಡುತ್ತಿದ್ದ ಮಹಿಳೆಯೋರ್ವಳು ಗಾಯನದ ಮೂಲಕ ಎಲ್ಲರ ಗಮನ ಸೆಳೆದಿದ್ದಳು. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದರು.
ಪ್ರಸಿದ್ದ ಗಾಯಕ ಹೀಮೇಶ್ ರೆಶಮಿಯಾ ಸಹಾಯದಿಂದ ಮುಂಬೈನಲ್ಲಿ ಗಾಯಕಿಯಾಗಿ ರಾಣು ಮಂಡಲ್ ಅವರು ನೆಲೆ ಕಂಡುಕೊಂಡಿದ್ದರು. ವಿಚಿತ್ರ ಮೇಕಪ್ ಹಾಗೂ ಉತ್ತಮ ಗಾಯನದ ಮೂಲಕ ಎಲ್ಲೆಡೆ ಸುದ್ದಿಯಲ್ಲಿದ್ದರು. ಉತ್ತಮ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದರು.
ಆದರೆ ಇದೀಗ ಮುಂಬೈನಲ್ಲಿ ಅವಕಾಶವಿಲ್ಲದೆ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ, ಮತ್ತೆ ಹಿಂದಿನ ಸ್ಥಿತಿಗೆ ತಲುಪಿದ್ದಾರೆ. ಮತ್ತೆ ದಯನೀಯ ಸ್ಥಿತಿಯಲ್ಲಿ ಜೀವನ ನಡೆಸಲಾರಂಭಿಸಿದ್ದಾರೆ.