Horrible accident near Naragunda Gadag district - Four members of the same family died! ಗದಗ ಜಿಲ್ಲೆ ನರಗುಂದ ಬಳಿ ಭೀಕರ ಅಪಘಾತ - ಒಂದೇ ಕುಟುಂಬದ ನಾಲ್ವರು ಸಾವು!

ಗದಗ ಜಿಲ್ಲೆ ನರಗುಂದ ಬಳಿ ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರು ಸಾವು!

ಗದಗ (gadag), ಆ. 18: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಆಲ್ಟೋ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ (accident), ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟ (death) ಘಟನೆ, ಆ. 18 ರ ಭಾನುವಾರ ಬೆಳಗ್ಗೆ ಗದಗ ಜಿಲ್ಲೆ ನರಗುಂದ ತಾಲೂಕು (gadag district nargund taluk) ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ.

ಹಾವೇರಿ (haveri) ಜಿಲ್ಲೆಯವರಾದ ರುದ್ರಪ್ಪ ಅಂಗಡಿ (55), ಪತ್ನಿ ರಾಜೇಶ್ವರಿ (45), ಪುತ್ರಿ ಐಶ್ವರ್ಯ (16) ಹಾಗೂ ಪುತ್ರ ವಿಜಯಕುಮಾರ್ (12) ಮೃತಪಟ್ಟವರೆಂದು ಗುರುತಿಸಲಾಗಿದೆ.

ಮೃತ ಕುಟುಂಬ ಶ್ರಾವಣ ಮಾಸದ ಹಿನ್ನೆಲೆಯಲ್ಲಿ, ಕಲ್ಲಾಪುರ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಲು ಕಾರಿನಲ್ಲಿ (car) ತೆರಳುತ್ತಿತು. ಮತ್ತೊಂದೆಡೆ, ಕೆ.ಎಸ್.ಆರ್.ಟಿ.ಸಿ ಬಸ್ (ksrtc bus) ಇಳಕಲ್ ನಿಂದ ಹುಬ್ಬಳಿಗೆ (hubli) ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು.

ಅಪಘಾತದ (accident) ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ನ ಮುಂಭಾಗದ ಒಂದು ಬದಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿಯಿತ್ತ ಪರಿಶೀಲನೆ ನಡೆಸಿದದಾರೆ.

Governor's permission for prosecution against CM: What next? ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ : ಮುಂದೇನು? Previous post ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ : ಮುಂದೇನು?
Graduate college student raped in Bangalore! ಬೆಂಗಳೂರಲ್ಲಿ ಪದವಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ! Next post ಬೆಂಗಳೂರಲ್ಲಿ ಪದವಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!