
ಆಟಿಕೆ ಎಂದು ಹಾವಿನ ಮರಿಯನ್ನೇ ಕಚ್ಚಿ ಸಾಯಿಸಿದ ಒಂದು ವರ್ಷದ ಬಾಲಕ..!
ಬಿಹಾರ (bihar), ಆ. 22: ಒಂದು ವರ್ಷದ ಮಗುವೊಂದು (child), ಆಟಿಕೆ (toy) ಎಂದು ತಿಳಿದು ಜೀವಂತ ಹಾವಿನ ಮರಿಯನ್ನೇ (baby snake) ಕಚ್ಚಿ ಸಾಯಿಸಿದ ವಿಲಕ್ಷಣ ಘಟನೆಯೊಂದು ಬಿಹಾರ (bihar) ರಾಜ್ಯದ ಗಯಾ ಜಿಲ್ಲೆಯ ಜಮುಹರ್ ಗ್ರಾಮದಲ್ಲಿ ನಡೆದಿದೆ!
ಕಳೆದ ಒಂದು ವಾರದ ಹಿಂದೆ ಈ ಘಟನೆ ನಡೆದಿದೆ. ಮನೆಯ ಮಹಡಿಯ ಮೇಲೆ ಬಾಲಕ ಆಟವಾಡುತ್ತಿದ್ದ (playing) ವೇಳೆ, ಹಾವಿನ ಮರಿಯೊಂದು ಬಂದಿದೆ. ಇದನ್ನು ಕೈಯಲ್ಲಿಡಿದು ಬಾಯಲ್ಲಿ ಜಗಿದಿದ್ದಾನೆ. ಇದರಿಂದ ಹಾವಿನ ಮರಿ ಮೃತಪಟ್ಟಿದ್ದೆ.
ಹಾವಿನ ಮರಿಯನ್ನು ಬಾಯಲ್ಲಿಟ್ಟುಕೊಂಡು ಜಗಿಯುತ್ತಿರುವುದನ್ನು ಗಮನಿಸಿದ ಮಗುವಿನ ತಾಯಿಯು, ಹಾವನ್ನು ತೆಗೆದು ಹಾಕಿದ್ದಾರೆ. ತಕ್ಷಣವೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರೆ.
ಪರೀಕ್ಷಿಸಿದ ವೈದ್ಯರು ಮಗು ಆರೋಗ್ಯವಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿಸಿದ್ದಾರೆ. ಬಾಲಕ ಕಚ್ಚಿದ ಹಾವು ವಿಷ ರಹಿತ ವರ್ಗಕ್ಕೆ (non venomous snake) ಸೇರಿದ್ದಾಗಿದೆ. ಸ್ಥಳೀಯ ಗ್ರಾಮದಲ್ಲಿ ಈ ಹಾವು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸದರಿ ಮಗುವು ತಾಯಿಯ ಜೊತೆಯಲ್ಲಿರುವ ವೇಳೆ ತೆಗೆದ ವೀಡಿಯೋವೊಂದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral video in social media) ಆಗಿದೆ. ಸದ್ಯ ಸುದ್ದಿಯ ಕೇಂದ್ರಬಿಂಧುವಾಗಿ ಪರಿಣಮಿಸಿದೆ.