ಸಾಗರ (sagar), ಆ. 23: ಈಜಾಡಲು ತೆರಳಿದ ಬೆಂಗಳೂರು (bengaluru) ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ, ಸಾಗರ ತಾಲೂಕಿನ ಆನಂದಪುರದ (sagara taluk anandapura) ಚಂಪಕ ಸರಸು ಕಲ್ಯಾಣಿಯಲ್ಲಿ ಆ. 23 ರ ಶುಕ್ರವಾರ ನಡೆದಿದೆ.
ಬೆಂಗಳೂರಿನ ಆಂಜನ್ ನಗರದ ನಿವಾಸಿ ಕುಶಾಲ್ ದೇವ್ (22) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾನೆ (engineer college student).
ಮೃತ ಕುಶಾಲ್ ದೇವ್ ಕಾಲೇಜ್ ನ ಸಹಪಾಠಿಗಳಾದ ಸಾಯಿರಾಂ ಹಾಗೂ ಯಶವಂತ್ ಎಂಬುವರೊಂದಿಗೆ, ಗುರುವಾರ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ (shimoga district) ಪ್ರವಾಸಕ್ಕೆ ಆಗಮಿಸಿದ್ದರು.
ಶುಕ್ರವಾರ ಇತಿಹಾಸ ಪ್ರಸಿದ್ದ ಚಂಪಕ ಸರಸು (champaka sarasu) ಕಲ್ಯಾಣಿಗೆ ಆಗಮಿಸಿದ್ದಾರೆ. ಕುಶಾಲ್ ದೇವ್ ಅವರು ಈಜಾಡಲು (swimming) ತೆರಳಿದ್ದಾರೆ. ಈ ವೇಳೆ ಕಲ್ಯಾಣಿಯಲ್ಲಿ ಮುಳುಗಿ ಅಸುನೀಗಿದ್ದಾರೆ. ಅಗ್ನಿಶಾಮಕ ದಳ (fire brigade) ಆಗಮಿಸಿ ನೀರಿನಿಂದ ಶವ ಹೊರ ತೆಗೆದಿದೆ.
ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ (psi) ಯುವರಾಜ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ (anandapura police station) ಪ್ರಕರಣ ದಾಖಲಾಗಿದೆ.

