shimoga | Information about out of state workers is mandatory – otherwise the case will fall! ಹೊರ ರಾಜ್ಯಗಳ ಕಾರ್ಮಿಕರ ಬಗ್ಗೆ ಮಾಹಿತಿ ಕಡ್ಡಾಯ – ಇಲ್ಲದಿದ್ದರೆ ಬೀಳುತ್ತೆ ಕೇಸ್!

shimoga | ಹೊರ ರಾಜ್ಯಗಳ ಕಾರ್ಮಿಕರ ಬಗ್ಗೆ ಮಾಹಿತಿ ಕಡ್ಡಾಯ – ಇಲ್ಲದಿದ್ದರೆ ಬೀಳುತ್ತೆ ಕೇಸ್!

ಶಿವಮೊಗ್ಗ (shivamogga), ಆ. 28: ಇತ್ತೀಚೆಗೆ ಎಲ್ಲೆಡೆ ಕೆಲಸಕಾರ್ಯಗಳಿಗೆ, ಹೊರ ರಾಜ್ಯಗಳಿಂದ ಆಗಮಿಸುವ ಕಾರ್ಮಿಕರನ್ನು (labour) ಬಳಕೆ ಮಾಡಲಾಗುತ್ತಿದೆ. ಈ ನಡುವೆ ಇಂತಹ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವ ಮುನ್ನ, ಪೊಲೀಸ್ ಠಾಣೆ ಅಥವಾ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ!

ಈ ಸಂಬಂಧ ಕಾರ್ಮಿಕ ಇಲಾಖೆ (labour department) ಆದೇಶ ಹೊರಡಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ವಿವರ ಈ ಮುಂದಿನಂತಿದೆ.  

ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ಕಟ್ಟಡ ಕಾಮಗಾರಿ (building work) ಮತ್ತಿತರ ಕೆಲಸಗಳಿಗೆ ಮೇಸ್ತ್ರಿ/ಮಾಲೀಕ/ಗುತ್ತಿಗೆದಾರರು ಹೊರ ರಾಜ್ಯದಿಂದ ಬರುವ ಕಾರ್ಮಿಕರನ್ನು (out-of-state workers) ಬಳಸಿಕೊಳ್ಳುತ್ತಿದ್ದಾರೆ. 

ಹೀಗೆ ಕೆಲಸಕ್ಕೆ ತೆಗೆದುಕೊಳ್ಳುವುದಕ್ಕೂ ಮುನ್ನ ಹೊರ ರಾಜ್ಯ ಕಾರ್ಮಿಕರ ಆಧಾರ್ ಕಾರ್ಡ್ (aadhar card) ಮತ್ತು ವಿಳಾಸವನ್ನು ಸಂಬಂಧಪಟ್ಟ ಹತ್ತಿರದ ಪೊಲೀಸ್ ಠಾಣೆ (police station) ಮತ್ತು ಕಾರ್ಮಿಕ ಇಲಾಖೆಗೆ ನೀಡಬೇಕು. ನಂತರವಷ್ಟೆ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಬೇಕು.

ತಪ್ಪಿದ್ದಲ್ಲಿ ಈ ಕಾರ್ಮಿಕರುಗಳಿಂದ ಯಾವುದೇ ಅಹಿತಕರ ಘಟನೆ / ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ, ಕಾರ್ಮಿಕರನ್ನು ನೇಮಿಸಿಕೊಂಡಿದ್ದ ಮೇಸ್ತ್ರಿ/ ಮಾಲೀಕರು/ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ.ಪಿ. ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

Rainfall has decreased in Malnad: Linganamakki Dam still 8 feet away from filling! ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ! Previous post shimoga rain | ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿಕೆ ಮುನ್ಸೂಚನೆ!
shimoga | construction of shed on road by shimoga-bhadravati urban development authority : protest in corporation premises demanding eviction ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದ ರಸ್ತೆಯಲ್ಲಿ ಶೆಡ್ ನಿರ್ಮಾಣ : ತೆರವಿಗೆ ಆಗ್ರಹಿಸಿ ಪಾಲಿಕೆ ಆವರಣದಲ್ಲಿ ಪ್ರತಿಭಟನೆ Next post shimoga | ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದ ರಸ್ತೆಯಲ್ಲಿ ಶೆಡ್ ನಿರ್ಮಾಣ : ತೆರವಿಗೆ ಆಗ್ರಹಿಸಿ ಪಾಲಿಕೆ ಆವರಣದಲ್ಲಿ ಪ್ರತಿಭಟನೆ