shimoga | ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದ ರಸ್ತೆಯಲ್ಲಿ ಶೆಡ್ ನಿರ್ಮಾಣ : ತೆರವಿಗೆ ಆಗ್ರಹಿಸಿ ಪಾಲಿಕೆ ಆವರಣದಲ್ಲಿ ಪ್ರತಿಭಟನೆ
ಶಿವಮೊಗ್ಗ (shivamogga), ಆ. 28: ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರವು (shimoga – bhadravatis urban development authority), ಸಾರ್ವಜನಿಕ ರಸ್ತೆಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿರುವ ಶೆಡ್ (shed) ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟವು ಶಿವಮೊಗ್ಗ ಪಾಲಿಕೆ (corporation) ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.
ವಿನೋಬನಗರ ಬಡಾವಣೆಯಲ್ಲಿರುವ ಪ್ರಾಧಿಕಾರದ ಕಚೇರಿ ಎದುರು ಕಳೆದ 40 ವರ್ಷಗಳ ಹಿಂದೆ, 30 ಅಡಿ ರಸ್ತೆ (road) ನಿರ್ಮಾಣ ಮಾಡಲಾಗಿತ್ತು. ಜನ – ವಾಹನ ಸಂಚಾರವಿರುವ ರಸ್ತೆಯಾಗಿದೆ. ಜೊತೆಗೆ ಸದರಿ ರಸ್ತೆಗೆ ಪಾಲಿಕೆ ಆಡಳಿತವು ಡಾಂಬರೀಕರಣ ನಡೆಸಿಕೊಂಡು ಬರುತ್ತಿತ್ತು.
ಪ್ರಾಧಿಕಾರದ ಮಹಾನಗರ ಯೋಜನೆಯ ನಕ್ಷೆಗಳಲ್ಲಿಯೂ ಸಹ ಸದರಿ ರಸ್ತೆಯನ್ನು ಗುರುತಿಸಲಾಗಿದೆ. ಆದರೆ ಪ್ರಾಧಿಕಾರವು ಏಕಾಏಕಿ ರಸ್ತೆ ಬಂದ್ ಮಾಡಿ, ವಾಹನಗಳ ನಿಲುಗಡೆಯ ಶೆಡ್ (parking shed) ನಿರ್ಮಾಣ ಮಾಡಿದೆ. ಪಾಲಿಕೆಯಿಂದ ನಿಯಮಾನುಸಾರ ಲೈಸೈನ್ಸ್ ಪಡೆದಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಪ್ರಾಧಿಕಾರ ಶೆಡ್ ನಿರ್ಮಾಣ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಅಧಿಕೃತ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಶೆಡ್ ತೆರವುಗೊಳಿಸುವಂತೆ, ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಸೂಚಿಸಿದ್ದಾರೆ. ಆದರೆ ಇಲ್ಲಿಯವರೆಗೂ ಶೆಡ್ ತೆರವುಗೊಳಿಸಿಲ್ಲ. ತಕ್ಷಣವೇ ಪಾಲಿಕೆ ಆಡಳಿತ ಅನದಿಕೃತ ಶೆಡ್ ತೆರವುಗೊಳಿಸಬೇಕು (unauthorized shed should be cleared). ತಪ್ಪಿತಸ್ತರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
