
shimoga accident | ರಸ್ತೆ ಬದಿ ನಿಂತಿದ್ದ ಬೈಕ್ ಸವಾರರ ಮೇಲೆ ಹರಿದ ಟಿಪ್ಪರ್ ಲಾರಿ!
ಶಿವಮೊಗ್ಗ (shivamogga), ಸೆ. 4: ಚಾಲಕನ ನಿಯಂತ್ರಣ ಕಳೆದುಕೊಂಡ ಟಿಪ್ಪರ್ ಲಾರಿ (lorry) ಯೊಂದು ಡಿಕ್ಕಿ ಹೊಡೆದ ಪರಿಣಾಮ, ಬೈಕ್ ನಲ್ಲಿದ್ದ ಇಬ್ಬರಿಗೆ ಗಾಯವಾದ ಘಟನೆ, ಶಿವಮೊಗ್ಗ ನಗರದ ಹೊರವಲಯ ಮೋಜಪ್ಪನ ಹೊಸೂರು ಕ್ರಾಸ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ Sep – 4 ಬುಧವಾರ ಬೆಳಿಗ್ಗೆ ನಡೆದಿದೆ.
ತ್ಯಾಜವಳ್ಳಿ ಗ್ರಾಮ (tyajavalli village) ದ ನಿವಾಸಿಗಳಾದ ಪೈಂಟ್ ಕೆಲಸ ಮಾಡುವ ಪ್ರಶಾಂತ್ (24) ಹಾಗೂ ರಾಹುಲ್ (28) ಗಾಯಗೊಂಡವರೆಂದು ಗುರುತಿಸಲಾಗಿದೆ. ಇದರಲ್ಲಿ ಪ್ರಶಾಂತ್ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಹುಲ್ ಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ.
ಬೈಕ್ (bike) ನಲ್ಲಿದ್ದವರು ಪೈಂಟ್ ಕೆಲಸಕ್ಕೆಂದು ಶಿವಮೊಗ್ಗ (shimoga) ಕ್ಕೆ ತೆರಳುತ್ತಿದ್ದು, ಮೋಜಪ್ಪನ ಹೊಸೂರು ಕ್ರಾಸ್ ಬಳಿ ಬೈಕ್ ನಿಲ್ಲಿಸಿಕೊಂಡಿದ್ದ ವೇಳೆ ಘಟನೆ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕ ಹಾಗೂ ಮಿತಿಮೀರಿದ ವೇಗವೇ ಅವಘಡಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಲಾರಿಯು ರಸ್ತೆ ಬದಿಯ ಕಟ್ಟೆಗೂ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಜೊತೆಗೆ ಲಾರಿಯ ಮುಂಭಾಗದ ಎರಡು ಚಕ್ರಗಳು ಕಿತ್ತು ಹೋಗಿವೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ವಿನೋಬನಗರ ಪೊಲೀಸ್ ಠಾಣಾ (vinobanagara police station) ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಅಪಾಯಕಾರಿ : ಸದರಿ ರಾಜ್ಯ ಹೆದ್ದಾರಿ (state highway) ಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ (accidents) ಸಂಖ್ಯೆ ಹೆಚ್ಚಾಗುತ್ತಿದೆ. ವಿನೋಬನಗರದಿಂದ ಸೋಮಿನಕೊಪ್ಪ (vinobanagara to sominakoppa) ದವರೆಗೆ ಚತುಷ್ಪಥ ಮಾರ್ಗವಿದೆ. ಆದರೆ ಅಲ್ಲಿಂದ ಮುಂದಕ್ಕೆ ರಸ್ತೆ ಸಂಪೂರ್ಣ ಕಿರಿದಾಗಿದೆ. ಮತ್ತೊಂದೆಡೆ, ಸದರಿ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆಯಿದೆ.
ವಾಹನಗಳ ಸಂಚಾರ ದಟ್ಟಣೆಗೆ ಅನುಗುಣವಾಗಿ, ಪಿಡಬ್ಲ್ಯೂಡಿ (pwd) ಇಲಾಖೆ ಹೆದ್ಧಾರಿ ಅಗಲೀಕರಣ ಮಾಡಬೇಕು. ಹಾಗೆಯೇ ಸದರಿ ಹೆದ್ದಾರಿಯಲ್ಲಿ ಮಿತಿಮೀರಿದ ವೇಗದಲ್ಲಿ ಸಂಚರಿಸುವ ಸರಕು ಸಾಗಾಣೆ ವಾಹನಗಳ ವಿರುದ್ದ, ಪೊಲೀಸ್ ಇಲಾಖೆ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ಕೋಟೆಗಂಗೂರು (kotegangururu) ಗ್ರಾಮ ಪಂಚಾಯ್ತಿ ಅಧ್ಯಕ್ಷ ದೂದ್ಯನಾಯ್ಕ್ ಅವರು ಆಗ್ರಹಿಸಿದ್ದಾರೆ.