ಶಿವಮೊಗ್ಗ (shivamogga), ಸೆ. 8: ಪ್ರಮುಖ ಗಣೇಶಮೂರ್ತಿಗಳ ಮೆರವಣಿಗೆ (ganesh procession) ಹಾಗೂ ಈದ್ ಮಿಲಾದ್ ಹಬ್ಬ (milad-un-nabi) ದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆಯು ಶಿವಮೊಗ್ಗ ನಗರದಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಭದ್ರತಾ ಕ್ರಮಕೈಗೊಂಡಿದೆ.
ಕ್ಷಿಪ್ರ ಕಾರ್ಯಾಚರಣೆ ಪಡೆ (rapid action force) ಯ ತುಕುಡಿಗಳನ್ನು ಕೂಡ ಭದ್ರತಾ ಕಾರ್ಯಕ್ಕೆ ಪೊಲೀಸ್ ಇಲಾಖೆ ಕರೆಯಿಸಿಕೊಂಡಿದೆ. ಈಗಾಗಲೇ ಆರ್.ಎ.ಎಫ್ ಯೋಧರು ಶಿವಮೊಗ್ಗ ನಗರದ (shimoga city) ಪ್ರಮುಖ ಬಡಾವಣೆ, ರಸ್ತೆಗಳಲ್ಲಿ ಪಥ ಸಂಚಲನ (root march) ನಡೆಸುತ್ತಿದ್ದಾರೆ.
ನೂರಾರು ಯೋಧರು ಶಸ್ತ್ರಸಜ್ಜಿತರಾಗಿ ಪಥ ಸಂಚಲನ ನಡೆಸುವ ಮೂಲಕ, ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡುವ ಹಾಗೂ ನಾಗರೀಕರಲ್ಲಿ ಧೈರ್ಯ – ವಿಶ್ವಾಸ ತುಂಬುವ ಕಾರ್ಯ ನಡೆಸುತ್ತಿದ್ದಾರೆ.
ಸೆ. 8 ರ ಭಾನುವಾರ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಪ್ಪುನಗರ (tippu nagara) ಚಾನಲ್, ಗೌಸಿಯಾ ವೃತ್ತ, ಶ್ರೀರಾಮ್ ನಗರ, ಮದರಸ ರಸ್ತೆ, ಜೆಸಿ ನಗರ ಝಂಡಾಕಟ್ಟೆ, ನೇತಾಜಿ ವೃತ್ತ ಸುತ್ತಮುತ್ತ ಆರ್.ಎ.ಎಫ್ ಸಿಬ್ಬಂದಿಗಳು ಪಥ ಸಂಚಲನ ನಡೆಸಿದರು.
ಈ ಸಂದರ್ಭದಲ್ಲಿ ತುಂಗಾನಗರ ಪೊಲೀಸ್ ಠಾಣೆ (tunga nagara police station) ಇನ್ಸ್’ಪೆಕ್ಟರ್ ಕೆ.ಟಿ.ಗುರುರಾಜ್, ಆರ್.ಎ.ಎಫ್ ಅಸಿಸ್ಟೆಂಟ್ ಕಮಾಡೆಂಟ್ ರಿಜೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

