
shimoga to bhadravati | ಶಿವಮೊಗ್ಗ – ಭದ್ರಾವತಿ ತಾಲೂಕುಗಳ ನಡುವೆ ರಚನೆಯಾಗಲಿದೆ 60 ಕಿ.ಮೀ. ಉದ್ದದ ಮಾನವ ಸರಪಳಿ!
ಶಿವಮೊಗ್ಗ (shivamogga), ಸೆ. 10 : ರಾಜ್ಯ ಸರ್ಕಾರವು ಸೆ. 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ (international democracy day) ಯನ್ನು ವಿಶಿಷ್ಟವಾಗಿ ಆಚರಣೆ ಮಾಡಲು ನಿರ್ಧರಿಸಿದೆ. ಅಂದು ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ (human chain bidar to chamarajanagar) ರಚನೆ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ (shimoga district) ಯಲ್ಲಿಯೂ ಮಾನವ ಸರಪಳಿ ರಚಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (shimoga zp ceo) ಹೇಮಂತ್ ಅವರು ತಿಳಿಸಿದ್ದಾರೆ.
ಭದ್ರಾವತಿ (bhadravati) ತಾಲೂಕಿನ ಕಾರೇಹಳ್ಳಿ ಗ್ರಾಮದಿಂದ ಪ್ರಾರಂಭವಾಗಿ, ಭದ್ರಾವತಿ – ಶಿವಮೊಗ್ಗ ನಗರದ ಮೂಲಕ ಹಾದು, ಶಿವಮೊಗ್ಗ (shimoga) ತಾಲೂಕಿನ ಮಡಿಕೆ ಚೀಲೂರು ಗ್ರಾಮದವರೆಗೆ ಸುಮಾರು 60 ಕಿ.ಮೀ. ಮಾನವ ಸರಪಳಿ (human chain) ರಚನೆ ಮಾಡುವ ಮೂಲಕ ಆಚರಿಸಲಾಗುತ್ತಿದೆ.
ಸಾರ್ವಜನಿಕರು ಸೆ. 15 ರಂದು ಬೆಳಗ್ಗೆ 8.30 ಕ್ಕೆ ನಿಗದಿತ ಮಾರ್ಗದಲ್ಲಿ ಹಾಜರಿದ್ದು, ಮಾನವ ಸರಪಳಿ ರಚನೆಗೆ ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಕೋರಿದ್ದಾರೆ.
ಹಾಗೆಯೇ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ((international democracy day) ಜಿಲ್ಲಾ ಮಟ್ಟದ ಕಾರ್ಯಕ್ರಮ ಬೆಳಗ್ಗೆ 8.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ (shimoga dc office) ಆವರಣದಲ್ಲಿ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಿಇಓ (ceo) ಮನವಿ ಮಾಡಿದ್ದಾರೆ.