shimoga | Shimoga - Employment Training Camp for Scheduled Caste Youth ಪರಿಶಿಷ್ಟ ಜಾತಿ ಯುವ ಜನತೆಗೆ ಉದ್ಯೋಗ ತರಬೇತಿ ಶಿಬಿರ

shimoga | ಶಿವಮೊಗ್ಗ – ಪರಿಶಿಷ್ಟ ಜಾತಿ ಯುವ ಜನತೆಗೆ ಉದ್ಯೋಗ ತರಬೇತಿ ಶಿಬಿರ

ಶಿವಮೊಗ್ಗ (shivamogga), ಸೆ. 13: 2024-25ನೇ ಸಾಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ (scheduled caste) ಯುವ ಜನರ ಸ್ವಾವಲಂಬನೆಯನ್ನು ಉತ್ತೇಜಿಸಲು, ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಯುವ ಜನರಿಗೆ ಪೂರಕವಾದ ಉದ್ಯೋಗಗಳನ್ನು ಒದಗಿಸುವ ಸಲುವಾಗಿ ತರಬೇತಿಗೆ (training) 18 ರಿಂದ 40 ವರ್ಷ ಒಳಗಿನ ಎಸ್.ಎಸ್.ಎಲ್.ಸಿ. (sslc) ಪಾಸ್/ಫೇಲ್ ಆಗಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯು ಬೆಂಗಳೂರಿನ (bengaluru)  ಶ್ರೀಕಂಠೀರವ ಕ್ರೀಡಾಂಗಣದಲ್ಲಿ  ಸೆ. 19 ರಿಂದ ಅ. 03 ರವರೆಗೆ  ಜೆಮ್/ಫಿಟೈಸ್ ತರಬೇತಿ ಹಾಗೂ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಸೆ. 21 ರಿಂದ ಅ.03 ರವರೆಗೆ ಮಹಿಳೆಯರಿಗೆ ಬ್ಯೂಟಿಷಿಯನ್ ತರಬೇತಿ ಶಿಬಿರ ಮತ್ತು ಅ. 04 ರಿಂದ ಅ. 09 ವರೆಗೆ ಚಾಟ್ಸ್ ತಯಾರಿಕೆ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (youth welfare and sports development department) ಯ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು  ಸೆ. 18 ರೊಳಗಾಗಿ ಸಲ್ಲಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯನ್ನು ಸಂಪರ್ಕಿಸುವುದು. 

bhadravati | Bhadravati Social Welfare Department invites applications for scholarship ಭದ್ರಾವತಿ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ Previous post bhadravati | ಭದ್ರಾವತಿ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
Recruitment for Anganwadi posts in Shimoga district: Intermediaries who collect money for giving work! Women and Child Development Department has issued a warning message not to be cheated ಶಿವಮೊಗ್ಗ ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆಗಳಿಗೆ ನೇಮಕ : ಕೆಲಸ ಕೊಡಿಸುವುದಾಗಿ ಹಣ ವಸೂಲಿಗಿಳಿದ ಮಧ್ಯವರ್ತಿಗಳು! ಮೋಸ ಹೋಗದಂತೆ ಎಚ್ಚರಿಕೆಯ ಸಂದೇಶ ನೀಡಿದ ಮಹಿಳಾ-ಮಕ್ಕಳ ಅಭಿವೃದ್ದಿ ಇಲಾಖೆ Next post shimoga | ಶಿವಮೊಗ್ಗ ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆಗಳಿಗೆ ನೇಮಕ : ಕೆಲಸ ಕೊಡಿಸುವುದಾಗಿ ಹಣ ವಸೂಲಿಗಿಳಿದ ಮಧ್ಯವರ್ತಿಗಳು!