Shivamogga Hindu Mahasabha Ganapati procession crowd! ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಜನಸಾಗರ!

shimoga | hindu mahasabha ganapati |ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಜನಸಾಗರ!

ಶಿವಮೊಗ್ಗ (shimoga), ಸೆ. 17: ಶಿವಮೊಗ್ಗ ನಗರದ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ (hindu mahasabha ganapati procession) ಸೆ. 17 ರ ಮಂಗಳವಾರ ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಹಿಂದಿನ ವರ್ಷಗಳ ರೀತಿಯಲ್ಲಿಯೇ ಪ್ರಸ್ತುತ ವರ್ಷ ಕೂಡ ಜನಸಾಗರವೇ ಹರಿದುಬಂದಿದೆ.

ಮೆರವಣಿಗೆಯಲ್ಲಿ ಅಪಾರ ಜನಸ್ತೋಮ ಭಾಗಿಯಾಗಿದೆ. ಸಂಭ್ರಮ ಮುಗಿಲುಮುಟ್ಟಿದೆ. ಗಾಂಧಿಬಜಾರ್ ರಸ್ತೆ (shimoga gandhi bazar road) ಯಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಜನಸಂದಣಿ ಕಂಡುಬರುತ್ತಿದೆ.

ಮತ್ತೊಂದೆಡೆ, ಮೆರವಣಿಗೆಯಲ್ಲಿ ಭಾಗಿಯಾಗಿರುವ ಯುವಕ – ಯುವತಿಯರು ಭರ್ಜರಿ ಡ್ಯಾನ್ಸ್ ಮಾಡುತ್ತಿದ್ದಾರೆ. ವಿವಿಧ ಕಲಾತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸಿವೆ. ವಿವಿಧ ಪಕ್ಷಗಳ ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.

ಭಾರೀ ಭದ್ರತೆ : ಮೆರವಣಿಗೆಗೆ ಜಿಲ್ಲಾ ಪೊಲೀಸ್ ಇಲಾಖೆ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದೆ. ಅಕ್ಷರಶಃ ಪೊಲೀಸ್ ಸರ್ಪಗಾವಲು ಹಾಕಿದೆ. 3 ಎಎಸ್ಪಿ, 25 ಡಿವೈಎಸ್ಪಿ, 60 ಇನ್ಸ್’ಪೆಕ್ಟರ್ ಗಳು, 110 ಸಬ್ ಇನ್ಸ್’ಪೆಕ್ಟರ್ ಗಳು, 200 ಎಎಸ್ಐ, 3500 ಹೆಡ್ ಕಾನ್ಸ್’ಟೇಬಲ್ – ಕಾನ್ಸ್’ಟೇಬಲ್, ಗೃಹ ರಕ್ಷಕ ದಳ ಸಿಬ್ಬಂದಿಗಳು,

1 ಕಂಪೆನಿ ಕ್ಷಿಪ್ರ ಕಾರ್ಯಾಚರಣೆ ಪಡೆ, 8 ಡಿಎಆರ್ ತುಕುಡಿ, 1 ಓಆರ್’ಟಿ ತುಕುಡಿ, 1 ಡಿ.ಎಸ್.ಡಬ್ಲ್ಯೂಎಟಿ ತುಕುಡಿ, 5 ಡ್ರೋಣ್ ಕ್ಯಾಮರಾಗಳು, 100 ವೀಡಿಯೋಗ್ರಾಫರ್ ಗಳನ್ನು ಭದ್ರತೆಗೆ ನಿಯೋಜಿಸಿದೆ.

ಮಾರ್ಗ ವಿವರ : ಭೀಮೇಶ್ವರ ದೇವಾಲಯ ಆವರಣದಿಂದ ಆರಂಭವಾಗಿರುವ ಮೆರವಣಿಗೆಯು ಎಸ್.ಪಿ.ಎಂ ರಸ್ತೆ, ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಎಎ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ ರಸ್ತೆ, ಜೈಲ್ ಸರ್ಕಲ್, ಕುವೆಂಪು ರಸ್ತೆ,

ಶಿವಮೂರ್ತಿ ಸರ್ಕಲ್, ಸವಳಂಗ ರಸ್ತೆ, ಡಿವಿಎಸ್ ಕಾಲೇಜ್ ರಸ್ತೆ, ಬಸವೇಶ್ವರ ವೃತ್ತ, ಕಾನ್ವೆಂಟ್ ರಸ್ತೆ, ಬಿ.ಹೆಚ್.ರಸ್ತೆ, ಕೋಟೆ ರಸ್ತೆ ಮಾರ್ಗವಾಗಿ ಸಾಗಿ ಭೀಮೇಶ್ವರ ದೇವಾಲಯ ಸಮೀಪದ ತುಂಗಾ ನದಿಯಲ್ಲಿ ಗಣಪತಿಯ ವಿಸರ್ಜನೆ ಮಾಡಲಾಗುತ್ತದೆ. ವಿಸರ್ಜನಾ ಕಾರ್ಯವು ತಡರಾತ್ರಿಯ ನಂತರ ನಡೆಯಲಿದೆ.

gruha laxmi update | gruha Lakshmi Yojana | 2 months balance deposit in one time account – Minister's statement ಗೃಹ ಲಕ್ಷ್ಮೀ ಯೋಜನೆ : 2 ತಿಂಗಳ ಬಾಕಿ ಹಣ ಒಂದೇ ಬಾರಿ ಖಾತೆಗೆ ಜಮಾ – ಸಚಿವರ ಹೇಳಿಕೆ Previous post gruha laxmi update | ಗೃಹ ಲಕ್ಷ್ಮೀ ಯೋಜನೆ | 2 ತಿಂಗಳ ಬಾಕಿ ಹಣ ಒಂದೇ ಬಾರಿ ಖಾತೆಗೆ ಜಮಾ – ಸಚಿವರ ಹೇಳಿಕೆ
Shivamogga: Power outage in various places on July 20 th! ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post shimoga power cut news | ಶಿವಮೊಗ್ಗ ತಾಲೂಕಿನ ಈ ಗ್ರಾಮಗಳಲ್ಲಿ ಸೆ. 20 ರಂದು ವಿದ್ಯುತ್ ವ್ಯತ್ಯಯ!