bhadravati girl missing | Bhadravati – Missing minor girl : Shoes bag ID card found near railway tracks! ಭದ್ರಾವತಿ – ಅಪ್ರಾಪ್ತ ಯುವತಿ ಕಣ್ಮರೆ : ರೈಲ್ವೆ ಹಳಿ ಬಳಿ ಪತ್ತೆಯಾದ ಚಪ್ಪಲಿ ಬ್ಯಾಗ್ ಐಡಿ ಕಾರ್ಡ್!

bhadravati minor girl missing | ಭದ್ರಾವತಿ –  ಅಪ್ರಾಪ್ತ ಯುವತಿ ಕಣ್ಮರೆ : ರೈಲ್ವೆ ಹಳಿ ಬಳಿ ಪತ್ತೆಯಾದ ಚಪ್ಪಲಿ, ಬ್ಯಾಗ್, ಐಡಿ ಕಾರ್ಡ್!

ಶಿವಮೊಗ್ಗ (shivamogga), ಸೆ. 21: ಭದ್ರಾವತಿಯ ಶಿವರಾಮನಗರ (bhadravathi shiva ramanagara) ದ ನಿವಾಸಿ ಅಪ್ರಾಪ್ತ ವಯಸ್ಸಿನ ಯುವತಿಯೋರ್ವಳು, ಇತ್ತೀಚೆಗೆ ಕಣ್ಮರೆ (missing) ಯಾದ ಘಟನೆ ನಡೆದಿದೆ.

ಈ ಸಂಬಂಧ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ (shimoga railway police station) ಯು ಸೆ. 21 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಬೆಟ್ಟಸ್ವಾಮಿ ಎಂಬುವರ ಪುತ್ರಿ 17 ವರ್ಷದ ರಂಜಿತಾ (ranjitha) ಕಾಣೆಯದವರೆಂದು ಗುರುತಿಸಲಾಗಿದೆ. ಸೆಪ್ಟೆಂಬರ್ 19 ರಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಫ್ಯಾಕ್ಟರಿ ಕೆಲಸಕ್ಕೆಂದು ರಂಜಿತಾ ತೆರಳಿದ್ದರು.

ಆದರೆ ಲಕ್ಷ್ಮೀಪುರ ರೈಲ್ವೆ ಬ್ರಿಡ್ಜ್ ಹಳಿ (railway bridge) ಸಮೀಪ ರಂಜಿತಾರವರ ಚಪ್ಪಲಿ, ಬ್ಯಾಗ್, ಐಡಿ ಕಾರ್ಡ್ ಗಳು ಸಿಕ್ಕಿರುತ್ತದೆ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಂಜಿತಾ ಅವರು 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ದುಂಡನೆಯ ಮುಖ ಹೊಂದಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಮೈಮೇಲೆ ಕೆಂಪು ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಲಗ್ಗಿನ್ಸ್ ಧರಿಸಿರುತ್ತಾರೆ.

ಇವರ ಕುರಿತು ಸುಳಿವು ದೊರಕಿದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ (shimoga railway police station) ದೂರವಾಣಿ ಸಂಖ್ಯೆ : 08182-222974/ 9480802124 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

Shivamogga: Worker dies of electrocution in Holalur arecanut plantation! ಶಿವಮೊಗ್ಗ : ಹೊಳಲೂರು ಅಡಕೆ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು! Previous post shimoga | ಶಿವಮೊಗ್ಗ – ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಅಪರಿಚಿತ ಪುರುಷರು ಸಾವು!
'TV channels are more interested in husband-wife fights than people's problems!': CM Sarcastic ‘ಟಿವಿ ಚಾನಲ್ ಗಳಿಗೆ ಜನರ ಸಮಸ್ಯೆಗಳಿಗಿಂತ ಗಂಡ - ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ!’ : ಸಿಎಂ ವ್ಯಂಗ್ಯ Next post cm siddaramaiah | ‘ಗಂಡ – ಹೆಂಡ್ತಿ ಜಗಳಗಳನ್ನೇ ಹೆಚ್ಚು ತೋರಿಸುವ ಟಿವಿ ಚಾನೆಲ್’ಗಳು!’ : ಸಿಎಂ ಸಿದ್ದರಾಮಯ್ಯ ವ್ಯಂಗ್ಯ