ಶಿವಮೊಗ್ಗ (shivamogga), ಸೆ. 21: ಶಿವಮೊಗ್ಗ ನಗರದಲ್ಲಿ ಸೆ. 22 ರ ಭಾನುವಾರ, ಈದ್ ಮಿಲಾದ್ (eid milad un nabi) ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಮೆರವಣಿಗೆಗೆ, ಜಿಲ್ಲಾ ಪೊಲೀಸ್ ಇಲಾಖೆಯು ಬಿಗಿ ಪೊಲೀಸ್ ಪಹರೆ ವ್ಯವಸ್ಥೆ ಮಾಡಿದೆ. ಸಾವಿರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸುತ್ತಿದೆ.
ಈ ಕುರಿತಂತೆ ಸೆ. 21 ರಂದು ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. 3 ಹೆಚ್ಚುವರಿ ಎಸ್ಪಿ, 25 ಡಿವೈಎಸ್ಪಿ, 60 ಇನ್ಸ್’ಪೆಕ್ಟರ್ ಗಳು, 110 ಸಬ್ ಇನ್ಸ್’ಪೆಕ್ಟರ್ ಗಳು, 200 ಸಹಾಯಕ ಸಬ್ ಇನ್ಸ್’ಪೆಕ್ಟರ್ ಗಳು,
3500 ಹೆಡ್ ಕಾನ್ಸ್’ಟೇಬಲ್, ಕಾನ್ಸ್’ಟೇಬಲ್, ಗೃಹ ರಕ್ಷಕ ದಳದ ಸಿಬ್ಬಂದಿಗಳು, 1 ಕ್ಷಿಪ್ರ ಕಾರ್ಯಾಚರಣೆ ಪಡೆ ತುಕುಡಿ, 1 ಡಿ.ಎಸ್.ಡಬ್ಲ್ಯೂ.ಎ.ಟಿ ತುಕುಡಿ, 5 ಡ್ರೋಣ್ ಕ್ಯಾಮರಾಗಳು ಹಾಗೂ 100 ವೀಡಿಯೋಗ್ರಾಫರ್ ಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಸೂಚನೆ : ಭದ್ರತಾ ಕಾರ್ಯಕ್ಕೆ ನಿಯೋಜಿತರಾದ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳ ಸಭೆಯನ್ನು, ಸೆ. 21 ರಂದು ನಗರದ ಡಿಎಆರ್ ಮೈದಾನದಲ್ಲಿ ಎಸ್ಪಿ (shimoga sp) ಜಿ. ಕೆ. ಮಿಥುನ್ ಕುಮಾರ್ ಅವರು ನಡೆಸಿದರು.
ಮೆರವಣಿಗೆ ಬಂದೋಬಸ್ತ್ ವೇಳೆ ಅನುಸರಿಸಬೇಕಾದ ಭದ್ರತಾ ನಿಯಮಗಳು ಸೇರಿದಂತೆ ವಿವಿಧ ವಿಷಯಗಳ ಕುರಿತಂತೆ ಮಾಹಿತಿ ನೀಡಿದ್ದಾರೆ.

