shimoga eid milad procession | ಶಿವಮೊಗ್ಗ : ಈದ್ ಮಿಲಾದ್ ಮೆರವಣಿಗೆಗೆ ಜನಸಾಗರ!
ಶಿವಮೊಗ್ಗ (shivamogga), ಸೆ. 22: ಶಿವಮೊಗ್ಗ ನಗರದಲ್ಲಿ ಸೆ. 22 ರ ಭಾನುವಾರ, ಈದ್ ಮಿಲಾದ್ (eid milad un nabi) ಅಂಗವಾಗಿ ನಡೆದ ಮೆರವಣಿಗೆ (procession) ಅದ್ಧೂರಿಯಾಗಿ ನಡೆಯಿತು. ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ರಸ್ತೆ, ವೃತ್ತಗಳಲ್ಲಿ ಮಾಡಿದ್ದ ಆಕರ್ಷಕ ಅಲಂಕಾರ ಗಮನ ಸೆಳೆಯಿತು.
ಮೆರವಣಿಗೆಗೆ ನಗರದ ವಿವಿಧೆಡೆಯಿಂದ ಜನಸಾಗರವೇ ಹರಿದು ಬಂದಿತ್ತು. ಡಿಜೆ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು. ಹಸಿರು ಬಾವುಟಗಳು ರಾರಾಜಿಸಿದವು. ಮೆಕ್ಕಾ, ಮದೀನಾ ಪ್ರತಿಕೃತಿಗಳು ಎಲ್ಲರ ಗಮನ ಸೆಳೆದವು. ಎ ಎ ವೃತ್ತದಲ್ಲಿ ಮಾಡಿದ್ದ ಅಲಂಕಾರವು ಸರ್ವರ ಆಕರ್ಷಣೆಯ ಕೇಂದ್ರಬಿಂಧುವಾಗಿತ್ತು.
ಗಾಂಧಿಬಜಾರ್ ರಸ್ತೆಯ ಜಾಮೀಯ ಮಸೀದಿಯಿಂದ ಮೆರವಣಿಗೆ ಆರಂಭಗೊಂಡಿತು. ಗಾಂಧಿ ಬಜಾರ್ 2 ನೇ ಕ್ರಾಸ್, ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ ಮುಖ್ಯ ರಸ್ತೆಯ ಓಲ್ಡ್ ಬಾರ್ ಲೈನ್ ರಸ್ತೆ – ಪೆನ್ಷನ್ ಮೊಹಲ್ಲಾ – ಬಾಲ್‌ರಾಜ್ ಅರಸ್ ರಸ್ತೆ,
ಮಹಾವೀರ ಸರ್ಕಲ್, ಗೋಪಿ ಸರ್ಕಲ್, ನೆಹರು ರಸ್ತೆ, ಅಮೀರ್ ಅಹ್ಮದ್ ಸರ್ಕಲ್ ಮಾರ್ಗವಾಗಿ ಬಿ ಹೆಚ್ ರಸ್ತೆ, ಅಶೋಕ ಸರ್ಕಲ್, ಎನ್ ಟಿ ರಸ್ತೆ, ಗುರುದೇವ ರಸ್ತೆ, ರ್ಕ್ಲಾಕ್ ಪೇಟೆ, ನೂರಾನಿ ಮಸೀದಿ, ಕೆಆರ್ ಪುರಂ ರಸ್ತೆ ಮಾರ್ಗವಾಗಿ ಆಮೀರ್ ಅಹಮ್ಮದ್ ಸರ್ಕಲ್ ತಲುಪಿತು.
ಭದ್ರತೆ : ಮೆರವಣಿಗೆಗೆ ಜಿಲ್ಲಾ ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ಸಾವಿರಾರು ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಿತ್ತು. 3 ಹೆಚ್ಚುವರಿ ಎಸ್ಪಿ, 25 ಡಿವೈಎಸ್ಪಿ, 60 ಇನ್ಸ್’ಪೆಕ್ಟರ್ ಗಳು, 110 ಸಬ್ ಇನ್ಸ್’ಪೆಕ್ಟರ್ ಗಳು, 200 ಸಹಾಯಕ ಸಬ್ ಇನ್ಸ್’ಪೆಕ್ಟರ್ ಗಳು,
3500 ಹೆಡ್ ಕಾನ್ಸ್’ಟೇಬಲ್, ಕಾನ್ಸ್’ಟೇಬಲ್, ಗೃಹ ರಕ್ಷಕ ದಳದ ಸಿಬ್ಬಂದಿಗಳು, 1 ಕ್ಷಿಪ್ರ ಕಾರ್ಯಾಚರಣೆ ಪಡೆ ತುಕುಡಿ, 1 ಡಿ.ಎಸ್.ಡಬ್ಲ್ಯೂ.ಎ.ಟಿ ತುಕುಡಿ, 5 ಡ್ರೋಣ್ ಕ್ಯಾಮರಾಗಳು ಹಾಗೂ 100 ವೀಡಿಯೋಗ್ರಾಫರ್ ಗಳನ್ನು ಭದ್ರತಾ ಕಾರ್ಯಕ್ಕೆ ಬಳಕೆ ಮಾಡಿತ್ತು.
