
shivamogga airport news | ಶಿವಮೊಗ್ಗ: ದೆಹಲಿ, ಮುಂಬೈಗೆ ವಿಮಾನ ಹಾರಾಟ ಯಾವಾಗ?
ಶಿವಮೊಗ್ಗ (shimoga), ಸೆ. 24: ಎಲ್ಲ ಅಂದುಕೊಂಡಂತೆ ನಡೆದರೆ, ಶಿವಮೊಗ್ಗದಿಂದ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ವಾಣಿಜ್ಯ ರಾಜಧಾನಿ ಎಂದೇ ಕರೆಯಲಾಗುವ ಮುಂಬೈಗೆ, ವಿಮಾನ ಹಾರಾಟ (flight service) ಆರಂಭವಾಗುವ ಸಾಧ್ಯತೆಗಳಿವೆ. ‘ಈ ಎರಡೂ ಮಹಾನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಸಲಾಗುತ್ತಿದೆ’ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (mp b y raghavendra) ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡಾನ್ ಯೋಜನೆಯಡಿ ಶಿವಮೊಗ್ಗದಿಂದ ದೆಹಲಿಗೆ (new delhi to shivamogga flight) ವಿಮಾನಯಾನಕ್ಕೆ ಈಗಾಗಲೇ ನಿರ್ಧಾರವಾಗಿದೆ. ಇದಕ್ಕೆ ಟೆಂಡರ್ ಕೂಡ ಆಗಿದೆ. ಸದ್ಯದಲ್ಲಿಯೇ ಈ ಮಾರ್ಗದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಉಳಿದಂತೆ ಮುಂಬೈಗೆ ಶಿವಮೊಗ್ಗದಿಂದ (mumbai to shivamogga flight) ವಿಮಾನ ಹಾರಾಟ ಆರಂಭಿಸುವ ನಿಟ್ಟಿನಲ್ಲಿಯೂ ಪ್ರಯತ್ನಗಳು ನಡೆಸಲಾಗುತ್ತಿದೆ. ಆದರೆ ಮುಂಬೈನಲ್ಲಿ ವಿಮಾನಗಳ ಹಾರಾಟದ ಪ್ರಮಾಣ ಹೆಚ್ಚಿದೆ. ಟ್ರಾಫಿಕ್ ಕ್ಲಿಯರೆನ್ಸ್ ಸಿಗುತ್ತಿಲ್ಲ. ಆದಾಗ್ಯೂ ಪ್ರಯತ್ನಗಳು ಮುಂದುವರೆಸಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸ್ಪೈಸ್ ಜೆಟ್ ಸಂಸ್ಥೆಯು ಅಕ್ಟೋಬರ್ 10 ರಿಂದ ಶಿವಮೊಗ್ಗದಿಂದ ಚೆನ್ನೈ (chennai shivamogga flight) ಹಾಗೂ ಹೈದ್ರಾಬಾದ್ ಗೆ ವಿಮಾನ (hyderabad to shivamogga flight) ಸಂಚಾರ ಆರಂಭಿಸಲಿದೆ. ಇದರಿಂದ ಈ ಭಾಗಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಭವಿಷ್ಯದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವು (shivamogga airport) ಮಧ್ಯ ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣವಾಗಿ ಅಭಿವೃದ್ದಿಯಾಗಲಿದೆ. ಶಿವಮೊಗ್ಗದ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.
ಅವಧಿ ವಿಸ್ತರಣೆ : ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್ (shivamogga airport license) ಅವಧಿಯನ್ನು ವಿಮಾನಯಾನ ನಿರ್ದೇಶನಾಲಯ (DGCA) ಮತ್ತೆ ಒಂದು ತಿಂಗಳು ವಿಸ್ತರಣೆ ಮಾಡಿದೆ. ಅಷ್ಟರೊಳಗೆ ಸಮಸ್ಯೆಗಳನ್ನು ಪರಿಹರಸಬೇಕು ಎಂದು ವಿಮಾನಯಾನ ನಿರ್ದೇಶನಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ ಎಂದು ಇದೇ ವೇಳೆ ಸಂಸದರು ತಿಳಿಸಿದ್ದಾರೆ.