
shimoga | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಪುರುಷರ ಶವಗಳು ಪತ್ತೆ!
ಶಿವಮೊಗ್ಗ (shivamogga), ಅ. 1: ಶಿವಮೊಗ್ಗ ನಗರ ಹಾಗೂ ಹೊರವಲಯದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಇಬ್ಬರು ಅನಾಮಧೇಯ ಪುರುಷರ ಶವಗಳು ಪತ್ತೆಯಾದ ಘಟನೆ ನಡೆದಿದೆ.
ಕೆರೆಯಲ್ಲಿ ಪತ್ತೆ : ಗ್ರಾಮಾಂತರ ಪೊಲೀಸ್ ಠಾಣೆ (rural police station) ವ್ಯಾಪ್ತಿಯ ದೇವಕಾತಿಕೊಪ್ಪ ಗ್ರಾಮದ ಇಂಡಸ್ಟ್ರಿಯಲ್ ಏರಿಯಾ ಸಮೀಪದ ಕೆರೆಯಲ್ಲಿ ಪುರುಷನ ಮೃತದೇಹ ಪತ್ತೆಯಾಗಿದೆ. ಮೃತರಿಗೆ ಸುಮಾರು 50 ರಿಂದ 60 ವರ್ಷ ವಯೋಮಾನವಿದೆ. ದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಹೆಸರು, ವಿಳಾಸ ಸೇರಿದಂತೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಮೃತರು ಸುಮಾರು 5. 06 ಅಡಿ ಎತ್ತರ, ದುಂಡುಮುಖ ಹೊಂದಿದ್ದು, ಮೈಮೇಲೆ ನೀಲಿ ಬಣ್ಣದ ತುಂಬು ತೋಳಿನ ಬನಿಯನ್ ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಹೆಚ್ಚಿನ ಮಾಹಿತಿಗೆ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.:08182 -261418/261410/261422/9480803350 ಗಳಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ. ಸಂ. 100 ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಪುಟ್ಪಾತ್ ಮೇಲೆ ಸಾವು : ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣ ಸಮೀಪದ ರಸ್ತೆಯ ಪುಟ್’ಪಾತ್ ಮೇಲೆ ಪುರುಷನೋರ್ವನ ಶವ ಪತ್ತೆಯಾಗಿದೆ. ಮೃತರಿಗೆ ಸುಮಾರು 65 ರಿಂದ 70 ವರ್ಷವಿದೆ. 4. 5 ಅಡಿ ಎತ್ತರ, ಗೋಧಿ ಬಣ್ಣ, ಸಾಧರಣಾ ಮೈಕಟ್ಟು ಹೊಂದಿದ್ದಾರೆ. ಮೃತನ ಮೈಮೇಲೆ ಖಾಕಿ ಬಣ್ಣದ ಶರ್ಟ ಇರುತ್ತದೆ. ಮೃತನ ಬಲಗಾಲಿನ ಪಾದ ಇರುವುದಿಲ್ಲ. ಅಂಗವಿಕಲತೆ ಕಂಡು ಬಂದಿರುತ್ತದೆ.
ಹೆಚ್ಚಿನ ಮಾಹಿತಿಗೆ ಪೊಲೀಸ್ ಕಂಟ್ರೋಲ್ ರೂಂ ನಂ.100 ಅಥವಾ ಎಸ್.ಪಿ ಶಿವಮೊಗ್ಗ -08182-261400, ಜಿಲ್ಲಾ ಕಂಟ್ರೋಲ್ ರೂಂ: 08182261413, ಜಯನಗರ ಪೊಲೀಸ್ ಠಾಣೆ:08182-261416 ಸಂಪರ್ಕಿಸಿ ಮಾಹಿತಿ ನೀಡುವಂತೆ ಜಯನಗರ ಪೊಲೀಸ್ ಠಾಣೆ (jayanagara police station) ಯ ರಾಣಾ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
shivamogga : In two separate incidents in Shivamogga city and outskirt, dead bodies of two unidentified men were found.