shimoga rain | ಶಿವಮೊಗ್ಗ : ಹಿಂಗಾರು ಮಳೆ ಆರ್ಭಟ – ಯೆಲ್ಲೋ ಅಲರ್ಟ್ ಮುನ್ಸೂಚನೆ!
ಶಿವಮೊಗ್ಗ (shivamogga), ಅ. 9: ಮುಂಗಾರು ಮಳೆ ಅಬ್ಬರಕ್ಕೆ ಸಾಕ್ಷಿಯಾಗಿದ್ದ ಮಲೆನಾಡಿನಲ್ಲೀಗ, ಹಿಂಗಾರು ಮಳೆ ಆರ್ಭಟ ಜೋರಾಗಿದೆ. ಅ. 9 ರ ಮಂಗಳವಾರ ತಡರಾತ್ರಿಯವರೆಗೂ, ಶಿವಮೊಗ್ಗ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಯಿತು.
ಶಿವಮೊಗ್ಗ ನಗರದಲ್ಲಿ ಸರಿಸುಮಾರು ನಾಲ್ಕೈದು ಗಂಟೆಗಳ ಕಾಲ ಎಡೆಬಿಡದೆ ಮಳೆಯಾಯಿತು. ಇದರಿಂದ ಹಲವೆಡೆ ಚರಂಡಿ, ಕಾಲುವೆಗಳು ಉಕ್ಕಿ ಹರಿದವು. ರಸ್ತೆಯ ಮೇಲೆಯೇ ಮಳೆ ನೀರು ಹರಿದ ಪರಿಣಾಮ, ರಾತ್ರಿ ವೇಳೆ ವಾಹನಗಳ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು.
ಭಾರೀ ಮಳೆ ಕಾರಣದಿಂದ ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳ ಕೆರೆಕಟ್ಟೆಗಳಿಗೆ ಭಾರೀ ಪ್ರಮಾಣದ ನೀರು ಹರಿದುಬಂದಿದೆ. ಕೆಲ ಗ್ರಾಮಗಳಲ್ಲಿ ಮತ್ತೆ ಕೆರೆಕಟ್ಟೆಗಳು ಕೋಡಿ ಬಿದ್ದು ಹರಿಯಲಾರಂಭಿಸಿವೆ.
ಮುನ್ಸೂಚನೆ : ಈ ನಡುವೆ ಹವಾಮಾನ ಇಲಾಖೆಯು, ಇನ್ನೂ ಕೆಲ ದಿನಗಳ ಕಾಲ ಹಿಂಗಾರು ಮಳೆ ಅಬ್ಬರ ಮುಂದುವರಿಯುವ ಮುನ್ಸೂಚನೆ ನೀಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅ.9 ರಂದು ಧಾರಾಕಾರ ಮಳೆ ಸಾಧ್ಯತೆಯಿದೆ ಎಂದು ಹವಾಮಾಮ ಇಲಾಖೆ ಹೇಳಿದ್ದು, ಯೆಲ್ಲೋ ಅಲರ್ಟ್ ಮುನ್ಸೂಚನೆ ಘೋಷಿಸಿದೆ.
In the malnad, which witnessed the monsoon rains, now the post-monsoon rainfall are raging. Till late Tuesday night, many parts of the district including Shimoga taluk received torrential rain. It rained non-stop for about four to five hours in Shimoga city. Due to this, drains and canals overflowed in many places.
