Shimoga : Sudden visit of the Home Minister to the police station! ಶಿವಮೊಗ್ಗ : ಪೊಲೀಸ್ ಠಾಣೆಗೆ ಗೃಹ ಸಚಿವರ ದಿಢೀರ್ ಭೇಟಿ!

shivamogga | ಶಿವಮೊಗ್ಗ : ಪೊಲೀಸ್ ಠಾಣೆಗೆ ಗೃಹ ಸಚಿವರ ದಿಢೀರ್ ಭೇಟಿ!

ಶಿವಮೊಗ್ಗ (shimoga), ಅ. 26: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅ.26 ರ ಶನಿವಾರ ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ನಡೆಯಿತು.

ಶಿವಮೊಗ್ಗ ನಗರದಲ್ಲಿ ಪೂರ್ವ ನಿರ್ಧರಿತ ಕಾರ್ಯಕ್ರಮಗಳಲ್ಲಿ ಭಾಗಿಯಾದ ಸಚಿವರು, ಸಾಗರಕ್ಕೆ ತೆರಳುವ ಮಾರ್ಗಮಧ್ಯೆ ಕುಂಸಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ್ದರು.

ಈ ವೇಳೆ ಠಾಣೆಯ ವಿವಿಧ ವಿಭಾಗಗಳಿಗೆ ತೆರಳಿ ವೀಕ್ಷಿಸಿದರು. ಕಡತಗಳ ಪರಿಶೀಲನೆ ನಡೆಸಿದರು. ಠಾಣೆಯಲ್ಲಿನ ಕೆಲಸಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಪೊಲೀಸರಿಗೆ ಕೆಲ ಸಲಹೆ – ಸೂಚನೆಗಳನ್ನು ಗೃಹ ಸಚಿವರು ನೀಡಿದರು.

ಈ ಸಂದರ್ಭದಲ್ಲಿ ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಬಲ್ಕಿಶ್ ಭಾನು, ಪೂರ್ವ ವಲಯ ಐಜಿಪಿ ರಮೇಶ್ ಬಾನೋತ್, ಎಸ್ಪಿ ಮಿಥುನ್ ಕುಮಾರ್, ಇನ್ಸ್’ಪೆಕ್ಟರ್ ದೀಪಕ್, ಗೃಹ ಸಚಿವರ ಆಪ್ತ ಸಹಾಯಕರಾದ ಕೆಎಎಸ್ ಅಧಿಕಾರಿ ಚನ್ನಬಸಪ್ಪ ಮೊದಲಾದವರಿದ್ದರು.

Home Minister Dr. G. Parameshwar made a surprise visit to Kumsi police station in Shimoga taluk on Saturday and conducted an investigation.

Shimoga : Inauguration of Police Community House by Home Minister ಶಿವಮೊಗ್ಗ : ಗೃಹ ಸಚಿವರಿಂದ ಪೊಲೀಸ್ ಸಮುದಾಯ ಭವನ ಉದ್ಘಾಟನೆ Previous post shimoga | ಶಿವಮೊಗ್ಗ : ಗೃಹ ಸಚಿವರಿಂದ ಪೊಲೀಸ್ ಸಮುದಾಯ ಭವನ ಉದ್ಘಾಟನೆ
Ganja sale case in Bhadravati taluk: Three arrested! ಭದ್ರಾವತಿ ತಾಲೂಕಿನಲ್ಲಿ ಗಾಂಜಾ ಮಾರಾಟ ಪ್ರಕರಣ : ಮೂವರ ಬಂಧನ! Next post bhadravati | ಭದ್ರಾವತಿ ತಾಲೂಕಿನಲ್ಲಿ ಗಾಂಜಾ ಮಾರಾಟ ಪ್ರಕರಣ : ಮೂವರ ಬಂಧನ!