
director guruprasad | ‘ಮಠ’ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣು!
ಬೆಂಗಳೂರು (bengaluru), ನ. 3: ಕನ್ನಡ ಚಲನ ಚಿತ್ರರಂಗದ ನಟ, ನಿರ್ದೇಶಕ ಗುರುಪ್ರಸಾದ್ (52) ಅವರು ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್’ಮೆಂಟ್ ನಲ್ಲಿನ ನಿವಾಸದಲ್ಲಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯೇ ಅವರು ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ನ. 3 ರ ಭಾನುವಾರ ಅವರ ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಸಾವಿನ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
ಮಠ ಸಿನಿಮಾ : ಸದಾ ಒಂದಿಲ್ಲೊಂದು ಕಾರಣದಿಂದ ಗುರುಪ್ರಸಾದ್ ಅವರು ಸುದ್ದಿಯಲ್ಲಿರುತ್ತಿದ್ದರು. ಕನ್ನಡ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದ ‘ಮಠ’ ಸಿನಿಮಾ ನಿರ್ದೇಶನದ ಮೂಲಕ, 2006 ರಲ್ಲಿ ಸಿನಿ ರಂಗಕ್ಕೆ ಕಾಲಿರಿಸಿದ್ದರು.
ತದನಂತರ ‘ಎದ್ದೇಳು ಮಂಜುನಾಥ’, ‘ಡೈರೆಕ್ಟರ್ ಸ್ಪೆಷಲ್’, ‘ಎರಡನೇ ಸಲ’ ಸಿನಿಮಾನಗಳನ್ನು ನಿರ್ದೇಶಿಸಿದ್ದರು. ಪ್ರಸ್ತುತ ವರ್ಷದ ಆರಂಭದಲ್ಲಿ ಅವರ ನಿರ್ದೇಶನದ ‘ರಂಗನಾಯಕ’ ಸಿನಿಮಾ ಬಿಡುಗಡೆಯಾಗಿತ್ತು.
ಪ್ರಸಿದ್ದ ರಿಯಾಲಿಟಿ ‘ಶೋ ಬಿಗ್ ಬಾಸ್’ (kannada big boss) ಸೇರಿದಂತೆ ಕಿರುತೆರೆಯ ಹಲವು ರಿಯಾಲಿಟಿ ಶೋಗಳಲ್ಲಿ ಗುರುಪ್ರಸಾದ್ ಅವರು ಕಾಣಿಸಿಕೊಂಡಿದ್ದರು.
ಇತ್ತೀಚಿಗಷ್ಟೆ ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಗುರುಪ್ರಸಾದ್ ಅವರ ವಿರುದ್ದ ದೂರು ದಾಖಲಾಗಿತ್ತು. ಪುಸ್ತಕ ಹಾಗೂ ಸಿಡಿಗಳನ್ನು ಖರೀದಿಸಿದ್ದ ಹಣ ನೀಡಿಲ್ಲ ಎಂದು ಆರೋಪಿಸಿ, ಗುರುಪ್ರಸಾದ್ ಅವರ ವಿರುದ್ದ, ಬೆಂಗಳೂರಿನ ಪುಸ್ತಕ ಮಾರಾಟ ಅಂಗಡಿಯೊಂದರ ಮಾಲೀಕರು ದೂರು ದಾಖಲಿಸಿದ್ದರು.
ನಿಗೂಢ : ತಾವು ತಂಗಿದ್ದ ಅಪಾರ್ಟ್’ಮೆಂಟ್ ನಲ್ಲಿಯೇ ಗುರುಪ್ರಸಾದ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದ್ದು, ಭಾಗಶಃ ಕೊಳೆತ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಪೊಲೀಸರ ತನಿಖೆಯಿಂದ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
Kannada actor and director Guruprasad (52) was found hanging in his residence at Madanayakanahalli apartment in Bangalore. It is suspected that he died a few days ago. His body was found partially decomposed on Sunday. More details about his death are yet to be known. Guruprasad was always in the news for one reason or another. He entered the film industry in 2006 by directing the movie ‘Mata’, which created a new sensation in the Kannada cinema industry.