shimoga | ಶಿವಮೊಗ್ಗ ತಾಲೂಕಿನ ವಿವಿಧೆಡೆ ಡಿಸೆಂಬರ್ 1 ರಂದು ವಿದ್ಯುತ್ ವ್ಯತ್ಯಯ!

#powercut #ವಿದ್ಯುತ್_ವ್ಯತ್ಯಯ #ವಿದ್ಯುತ್ #ಮೆಸ್ಕಾಂ #mescom

ಶಿವಮೊಗ್ಗ (shivamogga), ನ. 30: ಶಿವಮೊಗ್ಗದ ಮಾಚೇನಹಳ್ಳಿ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಡಿಸೆಂಬರ್ 01 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿವರ : ಮಾಚೇನಹಳ್ಳಿ, ಬಿದರೆ, ನಿದಿಗೆ, ಹಾರೆಕಟ್ಟೆ, ಸೋಗಾನೆ, ರೆಡ್ಡಿಕ್ಯಾಂಪ್, ಆಚಾರಿಕ್ಯಾಂಪ್, ಹೊಸೂರು, ದುಮ್ಮಳ್ಳಿ, ಶುಗರ್ ಕಾಲೋನಿ, ಓತಿಘಟ್ಟ, ಜಯಂತಿಗ್ರಾಮ, ಹೊನ್ನವಿಲೆ,

ಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮಾಳೇನಹಳ್ಳಿ, ರಾಮಮೂರ್ತಿ ಮಿನರಲ್ಸ್ & ಮೆಟಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐ.ಟಿ. ಪಾರ್ಕ್, ಮಲ್ನಾಡ್ ಆಸ್ಪತ್ರೆ, ನವುಲೆಬಸವಾಪುರ,

ಕೆ.ಎಸ್.ಆರ್.ಪಿ.ಕಾಲೋನಿ, ಕೆ.ಎಂ.ಎಫ್ ಡೈರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →