
shimoga rain | ಫೆಂಗಲ್ ಚಂಡಮಾರುತ ಎಫೆಕ್ಟ್ : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆ – ಆರೆಂಜ್ ಅಲರ್ಟ್ ಮುನ್ಸೂಚನೆ!
ಶಿವಮೊಗ್ಗ (shivamogga), ಡಿ. 1: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಹವಾಮಾನದಲ್ಲಿ ವೈಪರೀತ್ಯವಾಗಿದ್ದು, ಚಂಡಮಾರುತ ಸೃಷ್ಟಿಯಾಗಿದೆ. ಇದರಿಂದ ದಕ್ಷಿಣ ಭಾರತ ರಾಜ್ಯಗಳಲ್ಲಿ ಮಳೆಯಾಗುತ್ತಿದೆ.
ಕರ್ನಾಟಕ ರಾಜ್ಯದ ಹಲವೆಡೆಯೂ ಫೆಂಗಲ್ ಚಂಡಮಾರುತದಿಂದ ಮಳೆಯಾಗಲಾರಂಭಿಸಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿಯೂ, ಫೆಂಗಲ್ ಎಫೆಕ್ಟ್ ಕಂಡುಬಂದಿದೆ. ಕಳೆದೆರೆಡು ದಿನಗಳಿಂದ ಮೋಡ ಕವಿದ ವಾತಾವರಣ ನೆಲೆಸಿದ್ದ ಜಿಲ್ಲೆಯಲ್ಲಿ, ಮಂಗಳವಾರದಿಂದ ಮಳೆಯಾಗಲಾರಂಭಿಸಿದೆ.
ಶಿವಮೊಗ್ಗ ನಗರ ಸೇರಿದಂತೆ ತಾಲೂಕಿನ ಹಲವೆಡೆ ಮಂಗಳವಾರ ಸಂಜೆಯಿಂದ ಮಳೆಯಾಗುತ್ತಿದೆ. ಜಿಲ್ಲೆಯ ಇತರೆಡೆಯು ಸಾಧಾರಾಣ ಮಳೆಯಾಗುತ್ತಿರುವ ವರದಿಗಳು ಬಂದಿವೆ.
ಚಂಡಮಾರುತ ಪರಿಣಾಮದಿಂದ ಜಿಲ್ಲೆಯ ತಾಪಮಾನದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಹಗಲು ವೇಳೆಯೂ ತಂಪನೆ ವಾತಾವರಣ ಕಂಡುಬರುತ್ತಿದೆ.
ರೈತರಿಗೆ ಸಂಕಷ್ಟ : ಫೆಂಗಲ್ ಚಂಡಮಾರತದಿಂದ ಬೀಳುತ್ತಿರುವ ಮಳೆಯು ರೈತರ ಪಾಲಿಗೆ ಹೊರೆಯಾಗಿ ಪರಿಣಮಿಸುವ ಸಾಧ್ಯತೆಗಳು ಗೋಚರವಾಗುತ್ತಿವೆ. ಪ್ರಸ್ತುತ ಶಿವಮೊಗ್ಗ ಜಿಲ್ಲೆಯಾದ್ಯಂತ ಭತ್ತ, ರಾಗಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಕಟಾವು ಕಾರ್ಯ ಬಿರುಸುಗೊಂಡಿದೆ.
ಈ ನಡುವೆ ಬೀಳುತ್ತಿರುವ ಮಳೆಯಿಂದ ಬೆಳೆ ನಷ್ಟದ ಆತಂಕ ಉಂಟು ಮಾಡಿದೆ. ಪ್ರಸ್ತುತ ವರ್ಷದ ಮುಂಗಾರು ಹಂಗಾಮಿನ ವೇಳೆ ಬಿದ್ದ ಭಾರೀ ಮಳೆಯಿಂದ ಬೆಳೆಗೆ ಹಾನಿಯಾಗಿತ್ತು. ಕಷ್ಟಪಟ್ಟು ಬೆಳೆ ಉಳಿಸಿಕೊಳ್ಳಲಾಗಿತ್ತು. ಇದೀಗ ಬೆಳೆಗಳ ಕಟಾವು ಕಾರ್ಯದ ವೇಳೆ ಮಳೆಯಾಗುತ್ತಿದೆ. ಇದರಿಂದ ಅಳಿದುಳಿದ ಬೆಳೆಯನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಕೆಲ ರೈತರು ಅಳಲು ತೋಡಿಕೊಳ್ಳುತ್ತಾರೆ.
ಮತ್ತೊಂದೆಡೆ, ಈಗಾಗಲೇ ಬೆಳೆ ಕಟಾವು ಮಾಡಿ ಹಸನು ಕಾರ್ಯದಲ್ಲಿ ತೊಡಗಿರುವ ರೈತರ ಸ್ಥಿತಿಯಂತೂ ಹೇಳತೀರದಾಗಿದೆ. ಮಳೆಯಿಂದ ಕಟಾವು ಮಾಡಿದ ಬೆಳೆ ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ.
ಆರೆಂಜ್ ಅಲರ್ಟ್ : ಹವಾಮಾನ ಇಲಾಖೆಯು ಶಿವಮೊಗ್ಗ ಜಿಲ್ಲೆಗೆ ಡಿ. 2 ಮತ್ತು ಡಿ. 3 ರಂದು ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಿದೆ. ವಿವಿಧೆಡೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
Due to the depression in the Bay of Bengal, there is an anomaly in the weather and a storm is created. Due to this it is raining in South Indian states. Cyclone Fengal has started raining in many parts of Karnataka state. Meanwhile in Shimoga district also, Fengal effect was seen. It has started raining in the district, which was under cloudy weather for the last couple of days, from Tuesday.