Arrival of monsoon: Heavy rains in the Western Ghats! ಮುಂಗಾರು ಆಗಮನ : ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ!

shimoga rain | ಫೆಂಗಲ್ ಚಂಡಮಾರುತ : ಮಲೆನಾಡಿನಲ್ಲಿ ವ್ಯಾಪಕ ಮಳೆ ಮುನ್ಸೂಚನೆ..!

ಶಿವಮೊಗ್ಗ (shivamogga), ಡಿ. 3: ಪ್ರಸ್ತುತ ಮುಂಗಾರು ಅವಧಿ ವೇಳೆ ಭಾರೀ ಮಳೆಗೆ ಸಾಕ್ಷಿಯಾಗಿದ್ದ ಮಲೆನಾಡಿನಲ್ಲಿ, ಪ್ರಸ್ತುತ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ, ಚಳಿಗಾಲದಲ್ಲಿಯೂ ಮಳೆಯಾಗಲಾರಂಭಿಸಿದೆ!

ಫೆಂಗಲ್ ಚಂಡಮಾರುತ ಎಫೆಕ್ಟ್ ನಿಂದ ಕಳೆದ ಮೂರು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನೆಲೆಸಿ್ದೆ. ಸೋಮವಾರ ಸಂಜೆಯಿಂದ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳು ಸೇರಿದಂತೆ ಹಲವೆಡೆ ಚದುರಿದಂತೆ ಮಳೆಯಾಗಲಾರಂಭಿಸಿದೆ.

ಮಳೆಯ ಜೊತೆಜೊತೆಗೆ ತಣ್ಣನೆ ಗಾಳಿಯೂ ಬೀಸುತ್ತಿದೆ. ಚಳಿ, ಮಳೆ, ಗಾಳಿಯ ವಾತಾವರಣ ಹಾಗೂ ದಿಢೀರ್ ಹವಾಮಾನ ವೈಪರೀತ್ಯದಿಂದ, ನಾಗರೀಕರ ಆರೋಗ್ಯದಲ್ಲಿಯೂ ಏರುಪೇರಾಗುವಂತಾಗಿದೆ. ಶೀತ, ಜ್ವರ ಮತ್ತೀತರ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಿದೆ.  

ಮುನ್ಸೂಚನೆ : ಈ ನಡುವೆ ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಡಿ. 3 ರಂದು ಆರೆಂಜ್ ಅಲರ್ಟ್ ಹಾಗೂ ಡಿ. 4 ರಂದು ಯೆಲ್ಲೋ ಅಲರ್ಟ್ ಘೋಷಿಸಿದೆ.

ತಣ್ಣನೆ ವಾತಾವರಣ : ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ, ಹಗಲು ವೇಳೆಯ ತಾಪಮಾನದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿತ್ತು. ಆದರೆ ಫೆಂಗಲ್ ಚಂಡಮಾರುತದಿಂದ, ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಲ ಬೇಗೆ ಸಂಪೂರ್ಣ ಇಳಿಕೆಯಾಗಿದೆ. ಹಗಲು ವೇಳೆಯೂ ತಣ್ಣನೆಯ ವಾತಾವರಣ ನೆಲೆಸುವಂತಾಗಿದೆ.   

In the highlands, which witnessed heavy rains during the current monsoon season, due to the depression in the Bay of Bengal, it has started raining in the winter as well!

shimoga rain | Shivamogga | Heavy rain in Malnad even before the start of monsoon! shimoga rain | ಶಿವಮೊಗ್ಗ | ಮುಂಗಾರು ಆರಂಭಕ್ಕೂ ಮುನ್ನವೇ ಮಲೆನಾಡಲ್ಲಿ ಭರ್ಜರಿ ಮಳೆ! Previous post shimoga rain | ಫಂಗಲ್ ಚಂಡಮಾರುತದಿಂದ ಮಳೆ : ಡಿಸೆಂಬರ್ 3 ಮಂಗಳವಾರ ಶಿವಮೊಗ್ಗ ಜಿಲ್ಲೆಯ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ !
Shimoga: Road widening work - electricity supply cut off in various places on January 4! shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ - ಜ. 4 ರಂದು ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತ! Next post shimoga | ಶಿವಮೊಗ್ಗ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ : ಯಾವಾಗ? ಎಲ್ಲೆಲ್ಲಿ?