holehonnuru | ಹೊಳೆಹೊನ್ನೂರು ರಾಷ್ಟ್ರೀಯ ಹೆದ್ಧಾರಿ ಅಗಲೀಕರಣ : ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ – ಪ್ರತಿಭಟನೆ ಎಚ್ಚರಿಕೆ!
ಭದ್ರಾವತಿ (bhadravati), ಜ. 18: ಹೊಳೆಹೊನ್ನೂರು ಹೊರವಲಯ ಎನ್ ಹೆಚ್ 13 ಹಾಗೂ ಹೊಳೆಹೊನ್ನೂರು – ಭದ್ರಾವತಿ ರಸ್ತೆ ಸಂಪರ್ಕದ ಸರ್ಕಲ್ ನಲ್ಲಿ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂಬಂಧ ಜ. 18 ರ ಮಧ್ಯಾಹ್ನ ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ ಹನುಮಂತು ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ಧಾರಿ ಇಲಾಖೆ ಎಂಜಿನಿಯರ್ ಗಳೊಂದಿಗೆ ಸಮಾಲೋಚನೆ ನಡೆಸಿತು.
ಸದರಿ ಪ್ರದೇಶದಲ್ಲಿ ಹೆದ್ಧಾರಿ ಅಗಲೀಕರಣದ ನಂತರ ಮಿತಿಮೀರಿದ ವೇಗದಲ್ಲಿ ವಾಹನಗಳು ಸಂಚರಿಸುತ್ತಿವೆ. ಸರ್ಕಲ್ ಮೂಲಕ ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸುತ್ತಿದೆ. ಅಪಘಾತ ವಲಯವಾಗಿ ಮಾರ್ಪಡುತ್ತಿದೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೆ ಹೆದ್ದಾರಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ನಿಯೋಗ ಆಕ್ರೋಶ ವ್ಯಕ್ತಪಡಿಸಿದೆ.
ಈ ಕಾರಣದಿಂದ ಸದರಿ ಸ್ಥಳದ ಹೊಳೆಹೊನ್ನೂರು – ಭದ್ರಾವತಿ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಫ್ಲೈ ಓವರ್ ಅಥವಾ ಅಂಡರ್ ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
‘ಒಂದು ವೇಳೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೆ ಹೆದ್ಧಾರಿ ಅಭಿವೃದ್ದಿಗೊಳಿಸಿದರೆ, ಮುಂದಿನ ದಿನಗಳಂದು ಹೆದ್ಧಾರಿ ಉದ್ಘಾಟನೆಗೆ ಅವಕಾಶ ನೀಡುವುದಿಲ್ಲ. ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಮುಖಂಡ ಸಿ ಹನುಮಂತು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹೊಳೆಹೊನ್ನೂರು ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಉಮೇಶ್, ಮುಖಂಡರಾದ ಶಿವಣ್ಣ, ಮಂಜು, ಅಂಜನಪ್ಪ, ಶಂಭುಲಿಂಗ, ವಿನಯ್, ರಾಮಲಿಂಗಣ್ಣ ಸೇರಿದಂತೆ ಮೊದಲಾದವರಿದ್ದರು.
Bhadravati, January 18: Local villagers have demanded that action should be taken to construct an overpass or an underpass in Holehonnur outskirts NH 13 and Holehonnur – Bhadravati road connection circle.
In this regard, on the afternoon of January 18, a delegation headed by C. Hanumantu, president of the Bock Congress, visited the place and consulted with the engineers of the National Highways Department.
Vehicles are plying at excessive speed in the said area after the widening of the highway. People-vehicular movement through the circle is becoming impassable. Becoming a disaster zone. The delegation expressed outrage that the highway is being developed without proper precautions.
