ಶಿವಮೊಗ್ಗ : ಬಲೆಯಲ್ಲಿ ಸಿಲುಕಿಬಿದ್ದ ನಾಗರಹಾವು..! ಶಿವಮೊಗ್ಗ, ಫೆ 7: ಮನೆ ಮುಂಭಾಗದ ಹೂವಿನ ಗಿಡಗಳ ಬೇಲಿಗೆ ರಕ್ಷಣೆಗೆಂದು ಹಾಕಿದ್ದ ಮೀನಿನ ಬಲೆಗೆ ನಾಗರಹಾವೊಂದು ಸಿಲುಕಿ ಬಿದ್ದ ಘಟನೆ, ಫೆಬ್ರವರಿ 7 ರಂದು ಶಿವಮೊಗ್ಗ ನಗರದ ಹೊರವಲಯ ಗೋಂಧಿಚಟ್ನಳ್ಳಿಯಲ್ಲಿ ನಡೆದಿದೆ. ನಾಗೇಂದ್ರ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಹೂವಿನ ಗಿಡಗಳ ರಕ್ಷಣೆಗೆಂದು ಬೇಲಿಯ ಸುತ್ತಲೂ ಬಲೆ ಹಾಕಲಾಗಿತ್ತು. ಆಕಸ್ಮಿಕವಾಗಿ ಸದರಿ ಬಲೆಗೆ ಬೃಹದಾಕಾರದ ನಾಗರಹಾವು ಹಾವು ಸಿಲುಕಿ ಬಿದ್ದಿದೆ. ಬಲೆಯಲ್ಲಿ ಹಾವು ಸಿಲುಕಿ ಬಿದ್ದು ಸಂಕಷ್ಟ ಪಡುತ್ತಿರುವುದನ್ನು ಗಮನಿಸಿದ ಕುಟುಂಬದವರು, ತಕ್ಷಣವೇ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ‘ಕತ್ತರಿಯ ಸಹಾಯದಿಂದ ಬಲೆ ಕತ್ತರಿಸಿ, ಸುಮಾರು 4 ಅಡಿ ಉದ್ದದ ನಾಗರಹಾವನ್ನು ಸುರಕ್ಷಿತವಾಗಿ ಸಂರಕ್ಷಿಸಲಾಯಿತು’ ಎಂದು ಸ್ನೇಕ್ ಕಿರಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

shimoga | ಶಿವಮೊಗ್ಗ : ಅತ್ಯಧಿಕ ಬಡ್ಡಿ ವಸೂಲಿ ಮಾಡಿದರೆ ಕೇಸ್ ದಾಖಲು – ಸಹಕಾರಿ ಇಲಾಖೆ ಎಚ್ಚರಿಕೆ!

ಶಿವಮೊಗ್ಗ (shivamogga), ಫೆ. 7: ಶಿವಮೊಗ್ಗ ಜಿಲ್ಲೆಯ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಲೇವಾದೇವಿಗಾರರು / ಗಿರವಿದಾರರು ಮತ್ತು ಹಣಕಾಸು ಸಂಸ್ಥೆಗಳು, ವ್ಯವಹಾರ ಸ್ಥಳದ ಕಚೇರಿಯಲ್ಲಿ ಪರವಾನಿಗೆ (ಲೈಸೆನ್ಸ್) ಮತ್ತು ಬಡ್ಡಿದರದ ಫಲಕವನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

ಈ ಕುರಿತಂತೆ ಫೆ. 7 ರಂದು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.  ಕರ್ನಾಟಕ ಲೇವಾದೇವಿ ಅಧಿನಿಯಮ 1961ರ ಪ್ರಕರಣ 28 ರ ಅಡಿ, ಸರ್ಕಾರವು ಬಡ್ಡಿದರ ನಿಗದಿಪಡಿಸಿದೆ. ಭದ್ರತಾ ಸಾಲಗಳಿಗೆ ವಾರ್ಷಿಕ ಶೇ. 14% ರಷ್ಟು, ಭದ್ರತಾ ರಹಿತ ಸಾಲಗಳಿಗೆ ವಾರ್ಷಿಕ ಶೇ. 16% ರಷ್ಟು ಬಡ್ಡಿಯನ್ನು ಮಾತ್ರ ವಿಧಿಸತಕ್ಕದ್ದು ಎಂದು ಹೇಳಿದ್ದಾರೆ.

ವ್ಯವಹಾರ ಸ್ಥಳದಲ್ಲಿ ಬಡ್ಡಿದರದ ಫಲಕವನ್ನು ಸಾರ್ವಜನಿಕರಿಗೆ ಕಾಣುವ ರೀತಿ ಪ್ರದರ್ಶಿಸಬೇಕು. ಸರ್ಕಾರವು ನಿಗಧಿಪಡಿಸಿದ ಬಡ್ಡಿದರಕ್ಕಿಂತ, ಹೆಚ್ಚಿನ ಬಡ್ಡಿಯನ್ನು ಪಡೆದ ಬಗ್ಗೆ ಪರಿವೀಕ್ಷಣೆಯಲ್ಲಿ ಕಂಡುಬಂದಲ್ಲಿ ಅಥವಾ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಾರ್ವಜನಿಕರು ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು- ದೂ.ಸಂ.: 080-23562951, ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಲೇವಾದೇವಿ ನಿಬಂಧಕರು, ಶಿವಮೊಗ್ಗ – ದೂ. ಸಂ.: 08182-222711, ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಲೇವಾದೇವಿ ನಿಬಂಧಕರು, ಶಿವಮೊಗ್ಗ ಉಪವಿಭಾಗ- ದೂ.ಸಂ.: 08182-225182,

ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಲೇವಾದೇವಿ ನಿಬಂಧಕರು, ಸಾಗರ ಉಪ ವಿಭಾಗ – ದೂ.ಸಂ.: 08183-221807 ಇವರುಗಳಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಲೇವಾದೇವಿ ಮತ್ತು ಗಿರವಿ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

The Deputy Director of Co-operative Societies said that it is mandatory for moneylenders / pawnbrokers and financial institutions running moneylending business in Shimoga district to display the license and interest rate board at the office of the place of business.

Under Section 28 of the Karnataka Usury Act, 1961, the Government has fixed the rate of interest. He said that only 14% interest per annum for secured loans and 16% per annum for unsecured loans should be charged.

Shimoga: Shimoga: Preservation of the cobra that was caught in a trap! shimoga : ಶಿವಮೊಗ್ಗ : ಬಲೆಗೆ ಸಿಲುಕಿ ಸಂಕಷ್ಟದಲ್ಲಿದ್ದ ನಾಗರಹಾವಿನ ಸಂರಕ್ಷಣೆ! Previous post shimoga : ಶಿವಮೊಗ್ಗ : ಬಲೆಗೆ ಸಿಲುಕಿ ಸಂಕಷ್ಟದಲ್ಲಿದ್ದ ನಾಗರಹಾವಿನ ಸಂರಕ್ಷಣೆ!
An air force officer of Shimoga district died after falling from a height of 1500 feet without opening the parachute! ಪ್ಯಾರಚೂಟ್ ತೆರೆಯದೆ 1500 ಅಡಿ ಎತ್ತರದಿಂದ ಬಿದ್ದು ಶಿವಮೊಗ್ಗ ಜಿಲ್ಲೆಯ ವಾಯುಪಡೆ ಅಧಿಕಾರಿ ಸಾವು! Next post shimoga | ಪ್ಯಾರಚೂಟ್ ತೆರೆಯದೆ 1500 ಅಡಿ ಎತ್ತರದಿಂದ ಬಿದ್ದು ಶಿವಮೊಗ್ಗ ಮೂಲದ ವಾಯುಪಡೆ ಅಧಿಕಾರಿ ಸಾವು!