Shivamogga: The body of an unidentified woman was found near a bar! ಶಿವಮೊಗ್ಗ : ಬಾರ್ ಸಮೀಪ ಅಪರಿಚಿತ ಮೃತ ಮಹಿಳೆಯ ಮೃತದೇಹ ಪತ್ತೆ!

shimoga | anandpura | ಅಪರಿಚಿತ ಮಹಿಳೆ ಶವ ಪತ್ತೆ : ಬಲಗೈ ಮೇಲಿದೆ ಮುರುಗೇಶ್ ಹೆಸರಿನ ಹಚ್ಚೆ ಗುರುತು!

ಶಿವಮೊಗ್ಗ (shivamogga), ಮಾ. 12: ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಗ್ರಾಮದ ರಂಗನಾಥ ಬೀದಿ ಪಕ್ಕದಲ್ಲಿರುವ ಭೂಮಿಕಾ ಏಜೆನ್ಸಿ ಎದುರು ಅನಾಮಧೇಯ ಮಹಿಳಯೋರ್ವರ ಶವ ಪತ್ತೆಯಾದ ಘಟನೆ ಮಾರ್ಚ್  6 ರಂದು ನಡೆದಿದೆ.

ಮಲಗಿದ್ದಲ್ಲೆ ಮಹಿಳೆ ಮೃತಪಟ್ಟಿದ್ದಾರೆ. ಮೃತ ಮಹಿಳೆಗೆ ಸುಮಾರು 30 ರಿಂದ 35 ವರ್ಷವಿದೆ. ಶವವನ್ನು ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸ್ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮೃತ ಮಹಿಳೆಯು ಸುಮಾರು 152 ಸೆಂಟಿ ಮೀಟರ್ ಎತ್ತರ, ಕಪ್ಪು ಮೈ ಬಣ್ಣ, ತೆಳುವಾದ ಮೈಕಟ್ಟು, ದುಂಡು ಮುಖ, ತಲೆಯಲ್ಲಿ  ಕಪ್ಪು ಗುಂಗುರು ಕೂದಲು ಇದ್ದು, ಬಲಗೈ ಮಧ್ಯದಲ್ಲಿ ಮುರುಗೇಶ್ ಎಂದು ಕನ್ನಡದಲ್ಲಿ ಹಚ್ಚೆ ಹಾಕಿದ ಗುರುತು ಇರುತ್ತದೆ. ಮೈ ಮೇಲೆ ಬಿಳಿ ಬಣ್ಣದ ಕೆಂಪು ಹೂವಿನ ವಿನ್ಯಾಸವಿರುವ ಚೂಡಿದಾರ್ ಧರಿಸಿದ್ದಾರೆ. 

ಮೃತ ಮಹಿಳೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಆನಂದಪುರ ಪೊಲೀಸ್ ಠಾಣೆ ದೂ.ಸಂ.: 08183-298100 / 9480803363, ಶಿವಮೊಗ್ಗ ಎಸ್.ಪಿ.ಕಚೇರಿ ದೂ.ಸಂ.: 08182-261400, ಸಾಗರ ವೃತ್ತ ನಿರೀಕ್ಷಕರ ದೂ.ಸಂ.: 9480803336 ಗಳನ್ನು ಸಂಪರ್ಕಿಸು ವಂತೆ ಪೊಲೀಸ್ ಪ್ರಕಟಣೆ ತಿಳಿಸಿದ್ದಾರೆ.

Shivamogga, March 12: The body of an anonymous woman was found in front of the Bhumika Agency, located next to Ranganath Street in Anandpur village in Sagar taluk of the district, on March 6.

If there are any heirs of the deceased woman, they are asked to contact Anandpur Police Station Tel. No.: 08183-298100 / 9480803363, Shivamogga S.P. Office Tel. No.: 08182-261400, Sagar Circle Inspector Tel. No.: 9480803336, the police release said.

shimoga | E-Khata confusion: What did the Shimoga Municipal Commissioner say? shimoga | ಇ – ಖಾತಾ ಗೊಂದಲ : ಶಿವಮೊಗ್ಗ ಪಾಲಿಕೆ ಆಯುಕ್ತರು ಹೇಳಿದ್ದೇನು? Previous post shimoga | ಇ – ಖಾತಾ ಗೊಂದಲ : ಶಿವಮೊಗ್ಗ ಪಾಲಿಕೆ ಆಯುಕ್ತರು ಹೇಳಿದ್ದೇನು?
What did Dr. Dhananjay Sarji say about the increasing stress and TV-mobile phone addiction in children? ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ, ಟಿವಿ – ಮೊಬೈಲ್ ಪೋನ್ ವ್ಯಸನದ ಬಗ್ಗೆ ಡಾ.ಧನಂಜಯ್ ಸರ್ಜಿ ಹೇಳಿದ್ದೇನು? Next post legislative council | ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ, ಟಿವಿ – ಮೊಬೈಲ್ ಪೋನ್ ವ್ಯಸನದ ಬಗ್ಗೆ ಡಾ. ಧನಂಜಯ್ ಸರ್ಜಿ ಹೇಳಿದ್ದೇನು?