
ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಪರಿಶೀಲನೆ : ವಾಹನಗಳಿಗೆ ಪರ್ಯಾಯ ಮಾರ್ಗ
ಶಿವಮೊಗ್ಗ (shivamogga), ಮಾ. 17: ಸಾಗರದಿಂದ ತಾಳಗುಪ್ಪ ಸ್ಟೇಷನ್ ನಡುವೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂಬರ್ 134 ಕಿ.ಮೀ : 145/600-700 ಮತ್ತು ಸಾಗರ-ಸೊರಬ ಬೈಪಾಸ್ ರಸ್ತೆ ಸ್ಟೇಷನ್ ನಡುವೆ ಬರುವ ಎಲ್‌ಸಿ ನಂ 130 ಕಿ.ಮೀ 143/600-700 ರಲ್ಲಿ ತಾಂತ್ರಿಕ ಪರಿಶೀಲನೆ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ 17-03-2025 ರಿಂದ 18-03-2025 ಮತ್ತು 20-03-2025 ರಿಂದ 21-03-2025 ರವರೆಗೆ ಗೇಟ್ ಮುಚ್ಚಲಾಗುತ್ತಿದೆ. ಈ ಕೆಳಗಿನಂತೆ ಪರ್ಯಾಯ ಮಾರ್ಗ ಕಲ್ಪಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಆದೇಶಿಸಿದ್ದಾರೆ.
134 ಎಲ್‌ಸಿ ನಂ-145/600-700 ಸಾಗರ-ತಾಳಗುಪ್ಪ 17-03-2025 ರಿಂದ 18-03-2025 ರವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆವರೆಗೆ ಎಲ್‌ಸಿ 132 ಸಾಗರ ಟೌನ್ ಶಿರವಾಳದಿಂದ-ಅಣಲೆಕೊಪ್ಪ ಇಲ್ಲಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
130 ಎಲ್‌ಸಿ ನಂ-143/600-700 ಸಾಗರ-ಆನಂದಪುರ ನಡುವೆ 20-03-2025 ರಿಂದ 21-03-2025 ರವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆವರೆಗೆ ಎಲ್‌ಸಿ 129 ಸಾಗರ ಟೌನ್ ಇಂಡಸ್ಟಿçಯಲ್ ಏರಿಯಾ ಬೈಪಾಸ್ ರಸ್ತೆ ಮತ್ತು ಎಲ್‌ಸಿ 132 ಸಾಗರ ಟೌನ್ ಅಣಲೆಕೊಪ್ಪದ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ, ಮೋಟಾರು ವಾಹನ ಕಾಯ್ದೆ 1988 ಕಲಂ 115 ರನ್ವಯ ತಾತ್ಕಾಲಿಕವಾಗಿ ಮೇಲ್ಕಂಡ ದಿನಾಂಕಗಳಲ್ಲಿ ಮಾತ್ರ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shivamogga, Mar 17: Technical inspection work has been carried out at Railway Level Crossing Gate No. 134 km: 145/600-700 between Sagara and Talaguppa Station and LC No. 130 km: 143/600-700 between Sagara – Soraba Bypass Road Station.