Shivamogga: Judge's surprise visit to Abbalagere Anganwadi - Meeting at Gram Panchayat office ಶಿವಮೊಗ್ಗ : ಅಬ್ಬಲಗೆರೆ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ – ಗ್ರಾಪಂ ಕಚೇರಿಯಲ್ಲಿ ಸಭೆ

shimoga | ಶಿವಮೊಗ್ಗ : ಅಬ್ಬಲಗೆರೆ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ – ಗ್ರಾಪಂ ಕಚೇರಿಯಲ್ಲಿ ಸಭೆ

ಶಿವಮೊಗ್ಗ (shivamogga), ಆಗಸ್ಟ್ 16: ಶಿವಮೊಗ್ಗ ನಗರದ ಹೊರವಲಯ ಅಬ್ಬಲಗೆರೆ ಗ್ರಾಮದ ಅಂಗನವಾಡಿಗೆ, ಆಗಸ್ಟ್ 16 ರಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ ಎಸ್ ಅವರು ದಿಡೀರ್ ಭೇಟಿಯಿತ್ತು ಪರಿಶೀಲಿಸಿದರು.

ಈ ವೇಳೆ ದಾಖಲಾತಿಗಳ ತಪಾಸಣೆ ನಡೆಸಿದರು. ಮಕ್ಕಳಿಗೆ ನೀಡಲಾಗುವ ಆಹಾರ ಹಾಗೂ ಅಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಸಭೆ : ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಖಾಯಂ ಲೋಕ್ ಅದಾಲತ್ ಕುರಿತಂತೆ ಜಾಗೃತಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಭಾಗಿಯಾದರು.

ಲೋಕ್ ಆದಾಲತ್ ಕುರಿತಂತೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಭಾಗ್ಯ ಬಿ ಹೊಸಟ್ಟಿ, ಉಪಾಧ್ಯಕ್ಷರಾದ ರಾಜಶೇಖರಪ್ಪ, ಪಿಡಿಓ ರಾಜಪ್ಪ  ಸೇರಿದಂತೆ ಗ್ರಾಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Shivamogga, August 16: On August 16, Santosh M.S., Member Secretary of the District Legal Services Authority and Senior Civil Judge, made a surprise visit to the Anganwadi in Abbalagere village on the outskirts of Shivamogga city and inspected it.

Ripponpet: School bus overturns – Nursery school children escape danger! ರಿಪ್ಪನ್’ಪೇಟೆ : ಶಾಲಾ ಬಸ್ ಪಲ್ಟಿ – ಅಪಾಯದಿಂದ ಪಾರಾದ ನರ್ಸರಿ ಶಾಲೆ ಮಕ್ಕಳು! Previous post Ripponpet | ರಿಪ್ಪನ್’ಪೇಟೆ : ಶಾಲಾ ಬಸ್ ಪಲ್ಟಿ – ಅಪಾಯದಿಂದ ಪಾರಾದ ಮಕ್ಕಳು!
Sagara - Fatal road accident : One dead, 8 injured! ಸಾಗರ - ಭೀಕರ ರಸ್ತೆ ಅಪಘಾತ : ಓರ್ವರ ಸಾವು, 8 ಜನರಿಗೆ ಗಾಯ! Next post sagara | ಸಾಗರ – ಭೀಕರ ರಸ್ತೆ ಅಪಘಾತ : ಓರ್ವರ ಸಾವು, 8 ಜನರಿಗೆ ಗಾಯ!