Theft case at thirthahalli Rameshwara Temple: Accused arrested! ತೀರ್ಥಹಳ್ಳಿ ರಾಮೇಶ್ವರ ದೇವಾಲಯದಲ್ಲಿ ಕಳವು ಪ್ರಕರಣ : ಆರೋಪಿ ಅರೆಸ್ಟ್!

thirthahalli news | ತೀರ್ಥಹಳ್ಳಿ ರಾಮೇಶ್ವರ ದೇವಾಲಯದಲ್ಲಿ ಕಳವು ಪ್ರಕರಣ : ಆರೋಪಿ ಅರೆಸ್ಟ್!

ತೀರ್ಥಹಳ್ಳಿ (Thirthahalli), ಆಗಸ್ಟ್ 17: ತೀರ್ಥಹಳ್ಳಿಯ ರಾಮೇಶ್ವರ ದೇವಾಲಯದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ದಾವಣಗೆರೆ ಜಿಲ್ಲೆಯ ಆರೋಪಿಯೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾವಣಗೆರೆಯ ಬಾಷಾ ನಗರದ ನಿವಾಸಿ ಸೈಯದ್ ಉಮರ್ (30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನನ್ನು ಆಗಸ್ಟ್ 15 ರಂದು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಆಗಸ್ಟ್ 17 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಆರೋಪಿಯಿಂದ ಕಳವು ಮಾಡಿದ್ದ 20,523 ನಗದು, 25 ಸಾವಿರ ರೂ. ಮೌಲ್ಯದ 2 ಮೊಬೈಲ್ ಪೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲಗುಂಜಿ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಇಮ್ರಾನ್ ಬೇಗ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಲಿಂಗೇಗೌಡ, ಮಂಜುನಾಥ ಹಂಪಿಹೊಳಿ, ವಿಜಯಕುಮಾರ್ ಸುರೇಶ್ ನಾಯ್ಕ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ : ತೀರ್ಥಹಳ್ಳಿ ಪಟ್ಟಣದ ಶ್ರೀ ರಾಮೇಶ್ವರ ದೇವನಸ್ಥಾನದ ನಿತ್ಯ ಅನ್ನದಾಸೋಹ ಸಭಾ ಭವನದಲ್ಲಿ 12-08-2025 ರ ರಾತ್ರಿ ಕಳವು ನಡೆದಿತ್ತು.

ಕಾಣಿಕೆ ಹುಂಡಿಯ ಹಣ, ಮೊಬೈಲ್ ಪೋನ್ ಕಳ್ಳತನ ಮಾಡಲಾಗಿತ್ತು. ಈ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿ ಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

Thirthahalli, August 17: Police have succeeded in arresting an accused from Davangere district in connection with the theft case at the Rameshwaram temple in Thirthahalli.

Shivamogga: 7-foot-long python found in car..! ಶಿವಮೊಗ್ಗ : ಕಾರಿನಲ್ಲಿ 7 ಅಡಿ ಉದ್ದದ ಹೆಬ್ಬಾವು..! Previous post shimoga | ಶಿವಮೊಗ್ಗ : ಕಾರಿನಲ್ಲಿ 7 ಅಡಿ ಉದ್ದದ ಹೆಬ್ಬಾವು..!
Monsoon rains are back in full swing in the hills! ಮಲೆನಾಡಿನಲ್ಲಿ ಮತ್ತೆ ಮುಂಗಾರು ಮಳೆ ಚುರುಕು! Next post shimoga rain | ಮಲೆನಾಡಿನಲ್ಲಿ ಮತ್ತೆ ಮುಂಗಾರು ಮಳೆ ಚುರುಕು!