Shivamogga: 7-foot-long python found in car..! ಶಿವಮೊಗ್ಗ : ಕಾರಿನಲ್ಲಿ 7 ಅಡಿ ಉದ್ದದ ಹೆಬ್ಬಾವು..!

shimoga | ಶಿವಮೊಗ್ಗ : ಕಾರಿನಲ್ಲಿ 7 ಅಡಿ ಉದ್ದದ ಹೆಬ್ಬಾವು..!

ಶಿವಮೊಗ್ಗ (shivamogga), ಆಗಸ್ಟ್ 17: ಕಾರೊಂದರಲ್ಲಿ  ಅಡಗಿದ್ದ ಬೃಹದಾಕಾರದ ಹೆಬ್ಬಾವೊಂದನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಸಂರಕ್ಷಣೆ ಮಾಡಿದ ಘಟನೆ ಶಿವಮೊಗ್ಗ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಎ ಬ್ಲಾಕ್ ನಲ್ಲಿ ಆಗಸ್ಟ್ 16 ರಂದು ನಡೆದಿದೆ.

ಶ್ವೇತಾ ಬಂಡಿ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ರಸ್ತೆ ಬದಿ ಹೋಗುತ್ತಿದ್ದ ಸದರಿ ಹೆಬ್ಬಾವು ವಾಹನಗಳ ಸಂಚಾರದಿಂದ ಭಯಭೀತವಾಗಿ, ಮನೆಯ ಹೊರಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಹಿಂಭಾಗದ ಬಂಪರ್ ನಲ್ಲಿ ಅಡಗಿಕೊಂಡಿತ್ತು.

ಇದನ್ನು ನೆರೆಮನೆಯವರು ಗಮನಿಸಿ, ಮಾಹಿತಿ ನೀಡಿದ್ದಾರೆ. ತಕ್ಷಣವೇ ಕುಟುಂಬದವರು ಉರಗ ಸಂರಕ್ಷಕ ಸ್ನೇಕ್ ಕಿರಣ್ ಗೆ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಕಿರಣ್ ಅವರು ಕಾರಿನ ಹಿಂಭಾಗದ ಬಂಪರ್ ನಲ್ಲಿ ಅಡಗಿದ್ದ ಸುಮಾರು 7 ಅಡಿ ಉದ್ದದ ಹೆಬ್ಬಾವನ್ನು, ಕಾರಿನ ಮೆಕಾನಿಕ್ ಗಳ ಸಹಾಯದಿಂದ ಸುರಕ್ಷಿತವಾಗಿ ಸಂರಕ್ಷಣೆ ಮಾಡುವಲ್ಲಿ ಸಫಲರಾಗಿದ್ದಾರೆ.

ಸದರಿ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಕಾಡಿಗೆ ಬಿಡಲಾಯಿತು ಎಂದು ಕಿರಣ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Shivamogga, August 17: A huge python hiding in a car was safely rescued by reptile conservationist Snake Kiran on August 16 in A Block of Swami Vivekananda Layout in Shivamogga city.

Sagara: Gas cylinder explosion at home! sagara | ಸಾಗರ : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ! Previous post sagara | ಸಾಗರ : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ!
Theft case at thirthahalli Rameshwara Temple: Accused arrested! ತೀರ್ಥಹಳ್ಳಿ ರಾಮೇಶ್ವರ ದೇವಾಲಯದಲ್ಲಿ ಕಳವು ಪ್ರಕರಣ : ಆರೋಪಿ ಅರೆಸ್ಟ್! Next post thirthahalli news | ತೀರ್ಥಹಳ್ಳಿ ರಾಮೇಶ್ವರ ದೇವಾಲಯದಲ್ಲಿ ಕಳವು ಪ್ರಕರಣ : ಆರೋಪಿ ಅರೆಸ್ಟ್!