
shimoga rain | ಮಲೆನಾಡಿನಲ್ಲಿ ಮತ್ತೆ ಮುಂಗಾರು ಮಳೆ ಚುರುಕು!
ಶಿವಮೊಗ್ಗ (shivamogga), ಆಗಸ್ಟ್ 17: ಮಲೆನಾಡು ಭಾಗದಲ್ಲಿ ಮತ್ತೆ ಮುಂಗಾರು ಮಳೆ ಚುರುಕುಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ನದಿಗಳ ಹರಿವಿನಲ್ಲಿ ಏರಿಕೆಯಾಗಿದೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ.
ಮತ್ತೊಂದೆಡೆ, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಆಗಸ್ಟ್ 18 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮಳೆ ವಿವರ : ಆಗಸ್ಟ್ 17 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಹೊಸನಗರ ತಾಲೂಕಿನ ಮಾಣಿಯಲ್ಲಿ 104 ಮಿಲಿ ಮೀಟರ್ (ಮಿ.ಮೀ.), ಯಡೂರು 140 ಮಿ.ಮೀ., ಹುಲಿಕಲ್ 161 ಮಿ.ಮೀ., ಮಾಸ್ತಿಕಟ್ಟೆ 174 ಮಿ.ಮೀ., ಚಕ್ರಾ 210 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ 135 ಮಿ.ಮೀ. ಮಳೆಯಾಗಿದೆ.
ಡ್ಯಾಂ ವಿವರ : ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಂನ ಒಳಹರಿವು 29,776 ಕ್ಯೂಸೆಕ್ ಗೆ ಏರಿಕೆಯಾಗಿದೆ. 4034 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಸದ್ಯ ಡ್ಯಾಂನ ನೀರಿನ ಮಟ್ಟ 1813. 50 (ಗರಿಷ್ಠ ಮಟ್ಟ : 1819) ಇದೆ. ಡ್ಯಾಂ ಗರಿಷ್ಠ ಮಟ್ಟ ತಲುಪಲು ಇನ್ನೂ ಕೇವಲ ಐದೂವರೆ ಅಡಿಯಷ್ಟು ನೀರು ಬೇಕಾಗಿದೆ.
ಭದ್ರಾ ಡ್ಯಾಂನ ಒಳಹರಿವು 21,043 ಕ್ಯೂಸೆಕ್ ಇದೆ. 19,828 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ 185. 1 (ಗರಿಷ್ಠ ಮಟ್ಟ : 186) ಅಡಿಯಿದೆ. ಉಳಿದಂತೆ ತುಂಗಾ ಡ್ಯಾಂನ ಒಳಹರಿವು 35,571 ಕ್ಯೂಸೆಕ್ ಇದ್ದು, 35,768 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
Shivamogga, August 17: Monsoon rains have intensified again in the Malnad region. Heavy rains are falling in the areas of the Western Ghats. This has led to an increase in the flow of rivers. There has been an increase in the inflow of major reservoirs.