
shimoga | ಶಿವಮೊಗ್ಗ : ವಿದ್ಯಾನಗರದಲ್ಲಿ ರಾತ್ರಿ ವೇಳೆ ಅನುಮಾನಾಸ್ಪದ ಗುಂಪಿನ ಸಂಚಾರ – ಸ್ಥಳೀಯರೇ? ಹೊರಗಿನವರೇ?
ಶಿವಮೊಗ್ಗ (shivamogga), ಅಕ್ಟೋಬರ್ 11 : ಶಿವಮೊಗ್ಗದ ವಿದ್ಯಾನಗರ ಬಡಾವಣೆಯ 6 ಮತ್ತು 7 ನೇ ಕ್ರಾಸ್ ಗಳಲ್ಲಿ, ಯುವಕರ ಗುಂಪೊಂದು ದೊಣ್ಣೆ ಹಿಡಿದು ಸಂಚರಿಸಿರುವುದು ಸಿ ಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಇವರು ಸ್ಥಳೀಯರೇ? ಅಥವಾ ಅಪರಿಚಿತರೇ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ತಡರಾತ್ರಿ ಒಂದೂವರೆ ಗಂಟೆ ಸರಿಸುಮಾರಿಗೆ ಸದರಿ ಗುಂಪು ರಸ್ತೆಗಳಲ್ಲಿ ಓಡಾಡಿದೆ. ರಾತ್ರಿ ವೇಳೆ ಗುಂಪು ಓಡಾಡಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ. ಬಡಾವಣೆಯಲ್ಲಿ ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕೆಂದು ನಿವಾಸಿಗಳು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಮತ್ತೊಂದೆಡೆ, ಸ್ಥಳೀಯ ಯುವಕರ ಗುಂಪು ರಾತ್ರಿ ವೇಳೆ ಬಡಾವಣೆಯ ರಸ್ತೆಗಳಲ್ಲಿ ಓಡಾಡಿದೆ. ಅನುಮಾನಾಸ್ಪದರನ್ನು ಪತ್ತೆ ಹಚ್ಚಲು ಸ್ಥಳೀಯ ಯುವಕರು ಸಂಚರಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಹೇಳುತ್ತವೆ.
ಕೋಟೆ ಠಾಣೆ ಇನ್ಸ್’ಪೆಕ್ಟರ್ ಹರೀಶ್ ಪಾಟೀಲ್ ನೇತೃತ್ವದ ಪೊಲೀಸ್ ತಂಡ ನಾಗರೀಕರ ಆತಂಕ ಪರಿಹರಿಸಲು, ಸಿ ಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸುತ್ತಿದೆ. ಜೊತೆಗೆ ವಿದ್ಯಾನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಸ್ತು ವ್ಯವಸ್ಥೆ ಹೆಚ್ಚಿಸಿದೆ. ಅನುಮಾನಸ್ಪದ ವ್ಯಕ್ತಿಗಳ ಚಲನವಲನದ ಮಾಹಿತಿ ಕಲೆ ಹಾಕುತ್ತಿದೆ ಎಂದು ತಿಳಿದುಬಂದಿದೆ.
Shivamogga, October 11: A group of youths carrying sticks were caught on CCTV cameras at the 6th and 7th crosses of Vidyanagar Layout in Shivamogga. Are they locals? Or are they from elsewhere? It remains to be seen.